ಬೆಂಗಳೂರು ಟೆಕಿ ಆತ್ಮಹತ್ಯೆ ದೇಶಾದ್ಯಂತ ಚರ್ಚೆ
ಬೆಂಗಳೂರು: ವರದಕ್ಷಿಣೆ ಕಾನೂನು ಬಳಸಿಕೊಂಡು ನಡೆಸಿದ ದೌರ್ಜನ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಟೆಕಿ ಘಟನೆ ದೇಶಾದ್ಯಂತ ಚರ್ಚೆಗೀಡು ಮಾಡಿದೆ. ಮಹಿಳೆಯರ ರಕ್ಷಣೆಗೆ ಇರುವ ಕಾನೂನನ್ನು ಹೇಗೆ ದುರುಪಯೋಗಡ ಸಾಫ್ಟವೇರ್ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾರತ್‌ಹಳ್ಳಿ ಠಾಣೆ ಪೊಲೀಸರು, ಮೃತನ ಸಹೋದರ ಬಿಕಾಸ್‌ಕುಮಾರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸುಭಾಷ್ ಪತ್ನಿ ನಿಖಿತಾ ಹಾಗೂ ಆಕೆಯ ಸಂಬಂಧಿಕರ ಮೇಲೆ ಎಫ್‌ಐಆರ್ ದಾಖಲಿಸಿ, ಪತ್ನಿ ಮತ್ತು ಸಂಬಂಧಿಕರಿಗೆ ನೋಟಿಸ್ ಕೊಡಲು ನಿರ್ಧರಿಸಿದ್ದಾರೆ.
ಉತ್ತರಪ್ರದೇಶ ಮೂಲದ ಅತುಲ್, ೨೦೧೯ ರಲ್ಲಿ ನಿಖಿತಾಳನ್ನು ಎಂಬುವವರನ್ನು ಮದುವೆಯಾಗಿದ್ದರು. ಇವರಿಗೆ ನಾಲ್ಕು ವರ್ಷದ ಗಂಡುಮಗು ಇದೆ. ಮದುವೆಯಾದಾಗಿನಿಂದಲೂ ಹೆಂಡತಿಯ ಕಿರುಕುಳ ಹೆಚ್ಚಾಗಿತ್ತು. ಅನೇಕ ಬಾರಿ ರಾಜಿ ಮಾಜಿ ಮಾಡಿಸುತ್ತಿದ್ದರು. ಸ್ವಲ್ಪದಿನಗಳ ನಂತರ ಮತ್ತೆ ಜಗಳವಾಡುತ್ತಿದ್ದಳು. ಕೊನೆಗೆ ವಿಚ್ಛೇದನಕ್ಕೆ ಅರ್ಜಿ ಹಾಕಲಾಗಿತ್ತು. ಪ್ರತಿಬಾರಿ ನ್ಯಾಯಾ ಲಯಕ್ಕೆ ಹೋದಾಗ ಮಗುವಿನ ಬಗ್ಗೆ ವಿಚಾರಿಸಿ ಭೇಟಿ ಮಾಡಿಸಲು ವಿನಂತಿಸುತ್ತಿದ್ದ. ಆದರೆ ಭೇಟಿ ಮಾಡಿಸಲು ೩೦ ಲಕ್ಷಕ್ಕೆ ಬೇಡಿಕೆ ಇಡುತ್ತಿದ್ದಳು. ವಿಚ್ಛೇದನಕ್ಕೆ ಮೂರು ಕೋಟಿ ರೂ ಬೇಡಿಕೆ ಇಡುತ್ತಿದ್ದಳು.
ಅತ್ತಿಗೆ ನಿಖಿತಾ ಆಕೆಯ ತಾಯಿ ನಿಶಾ, ಸಹೋದರ ಅನುರಾಗ್, ಚಿಕ್ಕಪ್ಪ ಸುಶೀಲ್ ಅವರು, ಪ್ರತಿನಿತ್ಯ ಅಣ್ಣನಿಗೆ ಕಿರುಕುಳ ಕೊಡುತ್ತಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುಭಾಷ್ ಮೇಲೆ ಇಲ್ಲಸಲ್ಲದ ದೂರು ದಾಖಲಿಸುತ್ತಿದ್ದಳು. ಇದರಿಂದ ಅಣ್ಣ ಅನೇಕ ಬಾರಿ ಅಲ್ಲಿಗೆ ಹೋಗುತ್ತಿದ್ದ. ಮಗುವನ್ನು ತೋರಿಸು ಅಂದರೆ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಅಲ್ಲದೇ ಮಾನಸಿಕವಾಗಿ ನಿಂದಿಸುತ್ತಿದ್ದಳು. ಇದರಿಂದ ಅಣ್ಣ ಮಾನಸಿಕವಾಗಿ ಕಿರು ಕುಳ ಅನುಭವಿಸುತ್ತಿದ್ದ. ಒಂದು ದಿನವೂ ನಮ್ಮ ಮುಂದೆ ಯಾವುದನ್ನೂ ಹೇಳುತ್ತಿರಲಿಲ್ಲ. ಕೊನೆಗೆ ಮೂರು ಕೋಟಿ ಕೊಡಲೇಬೇಕು ಎಂದು ಹಠ ಹಿಡಿದು ಪ್ರತಿದಿನ ಪೋನ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದರು ಈ ಕಾರಣದಿಂದಲೇ ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುಭಾಷ್ ಸಹೋದರ ಬಿಕಾಸ್‌ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
೪೦ ಸಲ ಬೆಂಗ್ಳೂರಿಂದ ಯುಪಿಗೆ ತೆರಳಿದ್ದ ಪತಿ
`ನನ್ನ ಮಗನಿಗೆ ಪತ್ನಿಯ ಮನೆಯವರು ಚಿತ್ರಹಿಂಸೆ ಕೊಟ್ಟರು. ನಮಗೂ ನೋವು ಕೊಟ್ಟಿದ್ದಾರೆ. ಆದರೆ ಮಗ ಇದೆಲ್ಲವನ್ನೂ ಸಹಿಸಿಕೊಂಡಿದ್ದ. ಅನೇಕ ವಿಷಯಗಳನ್ನು ನಮ್ಮ ಮುಂದೆಯೂ ಹೇಳಿಕೊಂಡಿಲ್ಲ. ಅವರು ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಕೊಡಲು ನಿರಾಕರಿಸಿದ್ದರಿಂದ ಮೊಮ್ಮಗುವನ್ನು ಕರೆದುಕೊಂಡು ೨೦೨೧ರಲ್ಲಿ ಮನೆ ಬಿಟ್ಟು ಸೊಸೆ ಹೋದರು. ಅದಾದ ಬಳಿಕ ವರದಕ್ಷಿಣ ಪ್ರಕರಣ ಸೇರಿ ನನ್ನ ಮಗನ ಮೇಲೆ ೯ ಸುಳ್ಳು ದೂರುಗಳನ್ನು ದಾಖಲಿಸಿದ್ದಾಳೆ. ಜೊತೆಗೆ ಆಕೆಯ ತಂದೆಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೂ ಅದನ್ನು ಮುಚ್ಚಿಟ್ಟು ಅವರ ಸಾವಿಗೆ ನನ್ನ ಮಗ ಕಾರಣ ಎಂದು ಬಿಂಬಿಸಲು ಯತ್ನಿಸಿದ್ದಳು ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ನಾನಾ ರೀತಿಯ ಕೇಸುಗಳನ್ನು ಹಾಕಿದ್ದರಿಂದ ಅದನ್ನು ಎದುರಿಸಲು ನಮ್ಮ ಮಗ ೪೦ ಬಾರಿ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದು ಹೋಗಿದ್ದಾರೆ ಎಂದು ವಿವರಿಸಿದರು.
ಮಗನಿಗೆ ಗಿಫ್ಟ್ ಬಾಕ್ಸ್
ಆತಹತ್ಯೆಗೂ ಮುನ್ನ ತನ್ನ ೪ ವರ್ಷದ ಮಗನಿಗಾಗಿ ಗಿಫ್ಟ್ ಬಾಕ್ಸ್ ನ್ನು ಮನೆಯಲ್ಲಿ ತಂದಿಟ್ಟಿದ್ದು ಅದನ್ನು ಮಗನಿಗೆ ತಲುಪಿಸುವಂತೆ ಡೆತ್‌ನೋಟಿನಲ್ಲಿ ಟೆಕ್ಕಿ ಉಲ್ಲೇಖಿಸಿದ್ದಾರೆ. ಅಲ್ಲದೆ ನ್ಯಾಯ ಬಾಕಿ ಇದೆ ಎಂಬ ಬರಹ ಇರುವ ಪೋಸ್ಟರ್ ಹಾಗೂ ಪೂರ್ಣಗೊಳಿಸಿರುವ ತನ್ನ ಕೆಲಸಗಳ ಪಟ್ಟಿಯನ್ನು ಗೋಡೆಗೆ ಅಂಟಿಸಿ ನಂತರ ಆತಹತ್ಯೆಗೆ ಶರಣಾಗಿದ್ದ.