ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೊದಲ ವಾಕ್ಚಿತ್ರ ಸುಲೋಚನಾಗೆ ೯೦ರ ಸಂಭ್ರಮ

05:00 AM Mar 03, 2024 IST | Samyukta Karnataka

ಗಣೇಶ್ ರಾಣೆಬೆನ್ನೂರು
ಬರೋಬ್ಬರಿ ೯೦ ವರ್ಷಗಳ ಹಿಂದೆ ಬೆಳ್ಳಿಪರದೆಯ ಮೇಲೆ ಅಕ್ಷರಶಃ ಜಾದೂ ನಡೆದಿತ್ತು. ಎಲ್ಲರೂ ನಿಬ್ಬೆರಗಾಗಿ ನೋಡುವಂತೆ ಮಾಡಿದ ಕ್ಷಣವದು… ಅಲ್ಲೀವರೆಗೂ ಮೂಕಿ ಚಿತ್ರಗಳನ್ನೇ ಕಣ್ತುಂಬಿಕೊಂಡಿದ್ದವರಿಗೆ ದೊಡ್ಡ ಪರದೆಯ ಮೇಲೆ ಮೊದಲ ವಾಕ್ಚಿತ್ರ ತೆರೆಕಂಡಿತ್ತು. ಅದು `ಸತಿ ಸುಲೋಚನ’. ೧೯೩೪ರ ಮಾರ್ಚ್ ೩ ರಂದು ಕನ್ನಡದ ಚೊಚ್ಚಲ ವಾಕ್ಚಿತ್ರ ಬೆಳ್ಳಿಪರದೆಯ ಮೇಲೆ ಮೋಡಿ ಮಾಡಿತ್ತು. ಸತಿ ಸುಲೋಚನ ಸಿನಿಮಾದಿಂದ ಆರಂಭವಾದ ಕನ್ನಡ ವಾಕ್ಚಿತ್ರಕ್ಕೆ ಇದೀಗ ೯೦ ವರ್ಷ ಪೂರೈಸಿದೆ.
ನೈಸರ್ಗಿಕ ಬೆಳಕಿನಲ್ಲೇ ಶೂಟಿಂಗ್!:
ಸತಿ ಸುಲೋಚನಾ ಚಿತ್ರದ ಚಿತ್ರೀಕರಣವನ್ನು ಕೊಲ್ಹಾಪುರದಲ್ಲಿ ಸುಮಾರು ಎರಡು ತಿಂಗಳ ಕಾಲ ನಡೆಸಲಾಯಿತು. ಆ ಊರಿನಲ್ಲಿ ಕೃತಕ ಬೆಳಕಿನಿಂದ ಶೂಟಿಂಗ್ ಮಾಡುವುದು ಕಷ್ಟವಾಗಿದ್ದರಿಂದ, ನೈಸರ್ಗಿಕ ಸೂರ್ಯನ ಬೆಳಕಿನಲ್ಲಿ ಮತ್ತು ಮಾನವ ನಿರ್ಮಿತ ಪ್ರತಿಫಲಕಗಳನ್ನು ಬಳಸಿ ಚಿತ್ರೀಕರಣ ಮಾಡಲಾಗಿದೆ ಎಂಬುದು ವಿಶೇಷ.
ಅಪರೂಪದ ಕ್ಷಣ: ಪ್ರದರ್ಶನ ಆರಂಭವಾಗುವ ಮೊದಲು ಸಭಾಂಗಣದ ಒಳಗೆ ಲೈಟ್ ಆಫ್ ಮಾಡಿದಾಗ, ಜನರು ಭಯದಿಂದ ಕಿರುಚಿದರು. ತದನಂತರ ಪ್ರೊಜೆಕ್ಟರ್ ಗಿರಕಿ ಹೊಡೆಯಿತು… ಕ್ಷಣಾರ್ಧದಲ್ಲೇ ಮೊದಲ ಕನ್ನಡ ಪದವನ್ನು ಪರದೆಯಿಂದ ಕೇಳಿದಾಗ ಭಯದ ಜತೆ ಸಂತೋಷ-ಸಂಭ್ರಮ ಚಪ್ಪಾಳೆ, ಶಿಳ್ಳೆಗಳೊಂದಿಗೆ ರಂಗೇರಿತ್ತು.

ಸಿನಿ ೯೦ ಲಾಂಛನ ಬಿಡುಗಡೆ
ಸತಿ ಸುಲೋಚನಾ ಸಿನಿಮಾ ಬಿಡುಗಡೆಯಾಗಿ ೯೦ ವರ್ಷ ಪೂರೈ­ಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಿನಿ ೯೦’ ಎಂಬ ಸಂಭ್ರಮಾಚರಣೆ ನಡೆಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಅದರ ಪೂರ್ವಭಾವಿಯಾಗಿ ಲಾಂಛನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭಾನುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯಸಿನಿ ೯೦’ ಲಾಂಛನ ಲೋಕಾರ್ಪಣೆ ಮಾಡಲಿದ್ದಾರೆ.

Next Article