For the best experience, open
https://m.samyuktakarnataka.in
on your mobile browser.

ಬೈಕ್‌ಗೆ ಲಾರಿ ಡಿಕ್ಕಿ: ಹಿಂಬದಿಯಲ್ಲಿ ಕುಳಿತ ಮಹಿಳೆ ಸಾವು

05:54 PM Dec 21, 2024 IST | Samyukta Karnataka
ಬೈಕ್‌ಗೆ ಲಾರಿ ಡಿಕ್ಕಿ  ಹಿಂಬದಿಯಲ್ಲಿ ಕುಳಿತ ಮಹಿಳೆ ಸಾವು

ಸಿಂಧನೂರು : ಲಾರಿಗೆ ಬೈಕ್ ತಗುಲಿದ ಪರಿಣಾಮ ಬೈಕ್ ಹಿಂಬಂದಿಯಲ್ಲಿ ಕುಳಿತ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ
ಶನಿವಾರ ಮಧ್ಯಾಹ್ನ ತಾಲ್ಲೂಕಿನ ಅರಗಿನಮರ ಕ್ಯಾಂಪಿನ ಸಮೀಪ ನಡೆದಿದೆ. ಅಪಘಾತದಲ್ಲಿ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಹುಸೇನಮ್ಮ(43) ಎಂದು ಗುರುತಿಸಿಲಾಗಿದೆ. ಸಿಂಧನೂರು ನಗರದಿಂದ ತಮ್ಮ ಸ್ವ ಗ್ರಾಮ ಪುಲಮೇಶ್ವರ ದಿನ್ನಿ ಕಡೆ ಬೈಕ ಮೇಲೆ ತಾಯಿ ಮತ್ತು ಮಗ ತೆರಳುತ್ತಿದ್ದಾಗ ಪಕ್ಕದಲ್ಲಿ ರಭಸವಾಗಿ ಬಂದ ಲಾರಿ ತಗುಲಿದಾಗ ಈ ಘಟನೆ ನಡೆದಿದೆ. ಮಹಿಳೆ ದೇಹವು ಎರಡು ತುಂಡಾಗಿದೆ. ಈ ಕುರಿತು ನಗರ ಟ್ರಾಫಿಕ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Tags :