ಬೈಕ ಬೆನ್ನಟ್ಟಿ ದಾಳಿ ಮಾಡಿದ ಕರಡಿ
ಯಲ್ಲಾಪುರ: ತಾಲೂಕಿನ ಚಂದ್ಗುಳಿ ವ್ಯಾಪ್ತಿಯ ಉಪಳೇಶ್ವರ ಹುತ್ಕಂಡ ಭಾಗದಲ್ಲಿ ಎರಡು ಕರಡಿ ಮತ್ತು ಒಂದು ಮರಿ ಸಂಚರಿಸುತ್ತಿದ್ದು ಶನಿವಾರ ಬೆಳ್ಳಂಬೆಳಿಗ್ಗೆ ವ್ಯಕ್ತಿಯೊಬ್ಬರ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.
ಕಾರ್ಯನಿರ್ಮಿತ್ತ ಚಂದ್ಗುಳಿ ಪಂಚಾಯತದ ಸದಸ್ಯ ಆರ್.ಎಸ್.ಭಟ್ಟ ದ್ವಿಚಕ್ರವಾಹನದಲ್ಲಿ ಕಸವಿಲೇವಾರಿ ಘಟಕದ ಬಳಿ ಮಾಯನಜಡ್ಡಿ ಮಾರ್ಗದಲ್ಲಿ ಸಾಗುತ್ತಿರುವಾಗ ಎರಡು ಕರಡಿಗಳು ಧಾಳಿ ನಡೆಸಿದವು.ಮೊದಲು ಅವರ ಕಾಲನ್ನು ಘಾಸಿಗೊಳಿಸಿತು. ನಂತರ ಇವರು ಕೂಗಾಡುತ್ತ ಬೈಕ್ ನಲ್ಲಿ ತಪ್ಪಿಸಿಕೊಂಡು ಹೋದಾಗಲೂ ಬೆಂಬತ್ತಿದ ಕರಡಿಗಳು ಮುಂದೆ ಹೋಗಿ ಅಡ್ಡಗಟ್ಟಿ ಮುಖದ ಎರಡು ಭಾಗದ ಕೆನ್ನೆಗಳಿಗೆ ಭುಜಕ್ಕೆ ತೊಡೆಯ ಭಾಗದಲ್ಲಿ ಗಂಭೀರವಾಗಿ ಗಾಯ ಗೊಳಿಸಿದೆ .ಎರಡು ಕರಡಿಗಳ ಜೊತೆ ಒಂದು ಮರಿಯೂ ಇದೆ. ನಿರ್ಜನ ಪ್ರದೇಶವಾದ ಕಾರಣ ಹೇಗೋ ಮುಂದುವರೆದು ತಕ್ಷಣದಲ್ಲಿ ಸರಕಾರಿ ಆಸ್ಪತ್ರೆಗೆ ಸೇರಿದರು.ಹೆಚ್ವಿನ ಚಿಕಿತ್ಸೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಆರ್.ಎಸ್..ಭಟ್ಟ ರವರಿಗೆ ಕರಡಿ ದಾಳಿ ನಡೆಸಿ ಘಾಸಿಗೊಳಿಸಿದ ಸಂಗತಿ ತಿಳಿದ ಶಾಸಕ ಶಿವರಾಮ ಹೆಬ್ಬಾರ್ ತಾಲೂಕಾಸ್ಪತ್ರೆಗೆ ತೆರಳಿ ಗಾಯಾಳುವಿನ ಸ್ಥಿತಿಯನ್ನು ವೀಕ್ಷಿಸಿದರು.