ಬ್ಯಾಂಕ್ ದರೋಡೆ ಪ್ರಕರಣ: ನಾಲ್ಕನೇ ಆರೋಪಿ ವಶಕ್ಕೆ
09:56 PM Jan 24, 2025 IST | Samyukta Karnataka
ಮಂಗಳೂರು: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ನಾಲ್ಕನೇ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುವನ್ವೇಲಿಯಲ್ಲಿ ಮತ್ತೊಬ್ಬ ಆರೋಪಿ ಷಣ್ಮುಗ ಸುಂದರಂ(65) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ದರೋಡೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಮುರುಗಂಡಿ ದೇವರ್‌ನ ತಂದೆ ಷಣ್ಮುಗ ಸುಂದರಂ. ದರೋಡೆ ಮಾಡಿದ ಚಿನ್ನವನ್ನು ಮುರುಗಂಡಿ ತನ್ನ ತಂದೆಯ ವಶಕ್ಕೆ ಒಪ್ಪಿಸಿದ್ದನು. ಷಣ್ಮುಗ ಸುಂದರಂನಿಂದ 18.5 ಕೆಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.