ಬ್ಯಾಂಕ್ ನೋಟಿಸಗೆ ಹೆದರಿ ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ
ಕಲಬುರಗಿ: ಬ್ಯಾಂಕ್ ಸಾಲದ ನೋಟಿಸ್‌ಗೆ ಹೆದರಿ ರೈತ ಓರ್ವ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಸುಲೇಪೆಟ್ ಪೊಲೀಸ್ ಠಾಣೆ ವ್ಯಕ್ತಪ್ತಿಯಲ್ಲಿ ನಡೆದಿದೆ.
ಇಲ್ಲಿನ ಪೊತಂಗಲ ಗ್ರಾಮದ ನಿವಾಸಿ ಪಾಂಡಪ್ಪ ಕೋರವನ್ (46) ಅತ್ಮಹತ್ಯೆಗೆ ಶಣಾದ ರೈತ ಎಂದು ತಿಳಿದುಬಂದಿದೆ. ಬ್ಯಾಂಕ್ ನಿಂದ 8 ಲಕ್ಷ ರೂ. ಸಾಲ ಪಡೆದ ಇವರು ಸಾಲ ತೀರಸುವಂತೆ ಬ್ಯಾಂಕ್ ಅಧಿಕಾರಿಗಳು ವಕೀಲರ ಮೂಲಕ ಎರಡು ಬಾರಿ ನೋಟಿಸ್ ನೀಡಿದ್ದಾರೆ.
ನೋಟಿಸ್‌ಗೆ ಹೆದರಿ ಎತ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದ, ಕುಟುಂಬಸ್ಥರಿಂದ ವಿರೋಧ ವ್ಯಕ್ತಪಡಿಸುವುದರಿಂದ ದಿಕ್ಕು ತೊಚದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
3 ಎಕರೆ ಜಮೀನು ಹೊಂದಿರುವ ಪಾಂಡಪ್ಪ ಸತತ ಮಳೆಯಿಂದಾಗಿ ತೊಗರಿ ಬೆಳೆ ಹಾಲಗಿದ್ದು, ಸಾಲದ ಖಿನ್ನತೆಗೆ ಒಳಗಾಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರಿಂದ ಬಹುತೇಕ ದೇಹ ಬೆಂಕಿಗೆ ಸುಟ್ಟಿತ್ತು. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ತೆರಳಿದ್ದಾಗ ರೈತ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.