ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬ್ರಿಟಿಷರ ಕಾಲದ ಕಾನೂನು ರದ್ದು

07:38 PM Dec 20, 2023 IST | Samyukta Karnataka

ಬೆಂಗಳೂರು: ಕೇಂದ್ರ ಬಿಜೆಪಿ ಸರಕಾರ 160 ವರ್ಷ ಹಳೆಯ ಕಾನೂನುಗಳನ್ನು ಬದಲಾಯಿಸಲು ಮಹತ್ವದ ಹೆಜ್ಜೆ ಇರಿಸಿದೆ ಎಂದು ರಾಜ್ಯ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಸರಣಿ ಪೋಸ್ಟ್‌ ಮಾಡಿದೆ.
ಹೊಸ ಭಾರತಕ್ಕೆ ಹೊಂದುವಂತೆ ನಮ್ಮ ಕಾನೂನುಗಳೂ ಮಾರ್ಪಾಡಾಗಬೇಕು. ಅದನ್ನು ಮಾಡುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಾಡುತ್ತಿದೆ. ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಸಂಹಿತೆ ಮಸೂದೆಗಳನ್ನು ಮಂಡಿಸುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ 160 ವರ್ಷ ಹಳೆಯ ಕಾನೂನುಗಳನ್ನು ಬದಲಾಯಿಸಲು ಮಹತ್ವದ ಹೆಜ್ಜೆ ಇರಿಸಿದೆ. ಬ್ರಿಟೀಷರು ಅವರ ಹಿತದೃಷ್ಟಿಯಿಂದ, ಭಾರತೀಯರನ್ನು ಹತ್ತಿಕ್ಕಲು ಮಾಡಲಾದ 1860ರ ಭಾರತೀಯ ದಂಡ ಸಂಹಿತೆ (IPC) ರದ್ದುಗೊಂಡು ಹೊಸ ಮೂರು ಕಾಯ್ದೆಗಳು ಜಾರಿಗೆ ಬರಲಿವೆ. ದಂಡ ಪ್ರಧಾನವಾಗಿದ್ದ ಕಾನೂನು ವ್ಯವಸ್ಥೆಯನ್ನು ಮೋದಿ ಸರ್ಕಾರ ನ್ಯಾಯ ಪ್ರಧಾನ ಮಾಡುತ್ತಿದೆ. ಪ್ರಸ್ತುತ ಸಣ್ಣ-ಪುಟ್ಟ ಅಪರಾಧ ಪ್ರಕರಣಗಳು ನ್ಯಾಯಾಲಯದ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುತ್ತಿದೆ. ಹೊಸ ವ್ಯವಸ್ಥೆಯಲ್ಲಿ ಇದು ಬದಲಾಗಲಿದ್ದು ಮಾರಣಾಂತಿಕವಲ್ಲದ ಹಲ್ಲೆ, ತಳ್ಳಾಟದಂಥ ಪ್ರಕರಣಗಳ ತ್ವರಿತ ಇತ್ಯರ್ಥವನ್ನು ಖಾತರಿ ಮಾಡಲಿದೆ. ತ್ವರಿತಗತಿಯಲ್ಲಿ ನ್ಯಾಯದಾನ ಆಗುವ ಕಾರಣ ಕ್ಷಿಪ್ರವಾಗಿ ನ್ಯಾಯ ಸಿಗುವುದೂ ಅಲ್ಲದೆ ಅನಗತ್ಯ ಅಲೆದಾಟ ಕೊನೆಗಾಣಿಸಲಿದೆ. ಆದರೆ ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವ ಕಾರ್ಯಗಳಲ್ಲಿ ತೊಡಗುವುದು ಮತ್ತು ಭಯೋತ್ಪಾದನೆಯಂಥ ಗಂಭೀರ ಪ್ರಕರಣಗಳಿಗೆ ಗಂಭೀರ ಶಿಕ್ಷೆಯನ್ನು ವಿಧಿಸಲಾಗುವುದು. ಅಲ್ಲದೆ ಆರ್ಥಿಕ ಅಪರಾಧಗಳಲ್ಲಿ ತೊಡಗುವವರು ವಿದೇಶಗಳಲ್ಲಿ ಮಾಡಿಟ್ಟ ಆಸ್ತಿಯನ್ನೂ ಜಪ್ತಿ ಮಾಡುವ ಅಧಿಕಾರ ಹೊಸ ಕಾನೂನು ನೀಡಲಿದೆ. ಹೊಸ ಭಾರತದ ಹೊಸ ಕಾನೂನು ವ್ಯವಸ್ಥೆ ಜನಸ್ನೇಹಿಯಾಗಿದ್ದು, ಮಹಿಳಾ ಪ್ರಧಾನವಾಗಿರುವಂತೆ ಬಿಜೆಪಿ ಸರ್ಕಾರ ಖಾತರಿ ಮಾಡಿದೆ. ಯಾವ ಠಾಣೆಯಲ್ಲಿ ಬೇಕಾದರೂ ಎಫ್‌ಐಆರ್‌ ದಾಖಲು ಮಾಡುವ ಹಕ್ಕನ್ನು ಜನ ಸಾಮಾನ್ಯರಿಗೆ ನೀಡಲಿದೆ. ಮಹಿಳೆಯರ ಗೌರವಕ್ಕೆ ಚ್ಯುತಿ ಬರುವ ಅಪರಾಧಗಳಿಗೆ ಗಂಭೀರ ಶಿಕ್ಷೆ ವಿಧಿಸುವುದು, ಅಂಥ ಪ್ರಕರಣಗಳಲ್ಲಿ ಮಹಿಳೆಯರ ಹೇಳಿಕೆಯನ್ನು ಮಹಿಳಾ ಅಧಿಕಾರಿಯ ಸಮಕ್ಷಮದಲ್ಲೇ ಪಡೆಯಬೇಕು ಎಂಬ ನಿಯಮ ಮತ್ತು ಮಹಿಳೆ ಇಚ್ಛಿಸಿದರೆ ಕುಟುಂಬದ ಯಾರಾದರೂ ಸದಸ್ಯರು ಉಪಸ್ಥಿತಿಯಲ್ಲಿರಬಹುದಾದ ಆಯ್ಕೆಯನ್ನು ಹೊಸ ಕಾನೂನು ನೀಡಲಿದೆ. ಜತೆಗೆ ಎಫ್‌ಐಆರ್‌ನಿಂದ ಹಿಡಿದು, ವಿಚಾರಣೆಯೂ ಒಳಗೊಂಡು ತೀರ್ಪು ನೀಡುವವರೆಗೆ ಎಲ್ಲಾ ಹಂತಗಳನ್ನೂ ಡಿಜಿಟಲ್‌ ದಾಖಲೀಕರಣ ಮಾಡುವುದು ಕಡ್ಡಾಯ. ಹೊಸ ವ್ಯವಸ್ಥೆಯು ಎಲ್ಲಾ ರೀತಿಯ ಡಿಜಿಟಲ್‌ ದಾಖಲೆಗಳನ್ನೂ ಅಧಿಕೃತ ಎಂದು ಪರಿಗಣಿಸುವುದಲ್ಲದೆ ನ್ಯಾಯ ವಿಚಾರಣೆಯ ವಿಡಿಯೋ ರೆಕಾರ್ಡಿಂಗ್‌ ಕೂಡ ಪ್ರಕರಣಕ್ಕೆ ಸಂಬಂಧಿಸಿದವರಿಗೆ ನೀಡಲಾಗುತ್ತದೆ. ಏಳು ವರ್ಷಗಳಿಗಿಂತ ಹೆಚ್ಚು ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ನ್ಯಾಯವಿಜ್ಞಾನ ಶಾಸ್ತ್ರ (ಫೊರೆನ್ಸಿಕ್‌ ಸೈನ್ಸ್) ಬಳಕೆ ಕಡ್ಡಾಯವಾಲಿದ್ದು ಅಪರಾಧಿ ಪತ್ತೆಗೆ ಸಹಕಾರಿಯಾಗಿ ನಿರಪರಾಧಿಗಳ ರಕ್ಷಣೆಗೆ ಪೂರಕವಾಗಲಿದೆ. ಇದುವರೆಗೆ ಭಾರತದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳ ಪೈಕಿ ಕೊಟ್ಟ ಅಷ್ಟೂ ಮಾತುಗಳನ್ನು ಈಡೇರಿಸಿದ ಒಂದೇ ಒಂದು ಸರ್ಕಾರವೆಂದರೆ ಅದು ಮೋದಿ ಸರ್ಕಾರ. ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಎಲ್ಲಾ ಮಾತುಗಳನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಈಡೇರಿಸಿದೆ.
ಕಾಶ್ಮೀರದ ದೀರ್ಘಕಾಲಿನ ಅಶಾಂತಿಗೆ ಕಾರಣವಾಗಿದ್ದ 370ನೇ ಅಧಿನಿಯಮ ರದ್ದತಿ, ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ, ಮುಸ್ಲಿಂ ತಾಯಿ-ತಂಗಿಯರ ಶೋಷಣೆಗೆ ಬಳಸಲಾಗುತ್ತಿದ್ದ ತ್ರಿವಳಿ ತಲಾಖ್ ನಿಷೇಧ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಸೇರಿದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ವರೆಗೆ ಪ್ರಣಾಳಿಕೆಯಲ್ಲಿ ನೀಡಲಾದ ಅಷ್ಟೂ ಆಶ್ವಾನೆಗಳನ್ನೂ ಈಡೇರಿಸಿ ಜನರ ಮುಂದೆ ಹೋಗುತ್ತಿರುವ ಏಕೈಕ ಸರ್ಕಾರ ನಮ್ಮದು. ಭಾರತೀಯರನ್ನು ದಂಡಿಸಲು ಬ್ರಿಟೀಷರು ಬಳಸಿದ ಕಾನೂನುಗಳನ್ನು ಬಳಸಿ ಇಷ್ಟು ವರ್ಷಗಳ ಕಾಲ ನಮ್ಮವರನ್ನೇ ಹತ್ತಿಕ್ಕಲಾಯಿತು. ಅದೆಲ್ಲ ಇನ್ನು ಕೊನೆಯಾಗಿ, ಎಂದೋ ನಿರ್ಮಾಣವಾಗಬೇಕಿದ್ದ ನವ ಭಾರತ ಈಗ ನಿರ್ಮಾಣವಾಗುತ್ತಿದೆ ಎಂದಿದ್ದಾರೆ.

Next Article