For the best experience, open
https://m.samyuktakarnataka.in
on your mobile browser.

ಭಗವಂತನ ಕೃಪೆಯಿಂದ ಸಕ್ಸಸ್ ಆದಿವಿ: ಕನ್ಹಾಯ್ಯಾ ನಾಯ್ಡು

10:41 AM Aug 17, 2024 IST | Samyukta Karnataka
ಭಗವಂತನ ಕೃಪೆಯಿಂದ ಸಕ್ಸಸ್ ಆದಿವಿ  ಕನ್ಹಾಯ್ಯಾ ನಾಯ್ಡು

ಬಳ್ಳಾರಿ: ಸಿಎಂ ಸಿದ್ದರಾಮಯ್ಯ ಸೇರಿ ಇಲ್ಲಿನ ಎಲ್ಲರೂ ನಮಗೆ ಸಹಕಾರ ನೀಡಿದ್ರು. ಭಗವಂತನ ಕೃಪೆಯಿಂದ ಸ್ಟಾಪ್ ಲಾಗ್ ಗೇಟು ಅಳವಡಿಕೆ ಮಾಡಿದ್ದೇವೆ ಎಂದು ತಜ್ಞ ಕನ್ಹಯ್ಯಾ ನಾಯ್ಡು ಹೇಳಿದರು.
ಜಲಾಶಯದ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎರಡು ವರ್ಷಗಳ ಹಿಂದೆ ನಾನು ಜಲಾಶಯಕ್ಕೆ ಬಂದಿದ್ದೆ.
ಈ ಮೊದಲೇ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡೋದಕ್ಕೆ ಹೇಳಿದ್ದೆ.
ಆದ್ರೆ ಅವಾಗ ಎಲ್ಲಾ ಸರಿ ಇದೆ ಅಂತಾ ಹೇಳಿದ್ರು. ಆದ್ರೆ ಇವಾಗ ಈ ಸಮಸ್ಯೆ ಆಗಿದೆ. ಈ ಘಟನೆ ನಡೆದಾಗ ನಾನು ಮಲಗಿದ್ದೆ, ಕಾಲ್ ಬಂತು. ಕೂಡಲೇ ನಮ್ಮವರನ್ನ ಕರೆಸಿ ಮಾತನಾಡಿದೆ. ಸ್ಟಾಪ್ ಲಾಗ್ ಗೇಟ್ ಕೂಡಿಸೋ ಬಗ್ಗೆ ಚರ್ಚೆ ಮಾಡಿದೆ. ಮೂರು ರಾಜ್ಯಗಳ ನೀರಾವರಿ ಬಗ್ಗೆ ಚರ್ಚೆ ಮಾಡಿದ್ವಿ.
ಸ್ಟಾಪ್ ಲಾಗ್ ಗೇಟ್ ಕೂಡಿಸುವ ಬಗ್ಗೆ ಡಿಸೈನ್ ರೆಡಿ ಮಾಡಿದೆ.
ಅದನ್ನ ಸಿಡಬ್ಲೂಸಿ ಹಾಗೂ ಜಲಾನಯನ ಪ್ರದೇಶದಲ್ಲಿ ಅಪ್ರೂವಲ್ ತಗೊಂಡೆ.
ನಾನು ನನ್ನ ಖರ್ಚು ಇಟ್ಕೊಂಡು ಬಂದೀನಿ. ಒಂದು 100 ವರ್ಷ ಬಾಳಿಕೆ ಬರುತ್ತೆ.
ಕ್ರಸ್ಟ್ ಗೇಟ್ ಗಳು 45 ವರ್ಷ ಗೇಟ್ ಬಾಳಿಕೆ ಬರುತ್ತೆ. ಆದ್ರೆ ಇದು 70 ವರ್ಷ ಆಗಿದೆ. ಸಿಎಂ ಬಂದಾಗ ಒಂದು ಮನವಿ ಮಾಡಿದ್ರು.
ಎಲ್ಲೋದ್ರೂ ನಿನ್ ಹೆಸರು ಹೇಳ್ತಾರೆ. ಏನಾದ್ರೂ ಮಾಡಿ ಬೆಳೆ ಬರುವಂತೆ ಮಾಡಿ ಎಂದು ಕೇಳಿಕೊಂಡಿದ್ದರು. ನಾನು ಆಗ ಅವ್ರಿಗೆ ಅಭಯ ನೀಡಿದ್ದೆ.
ಆಗ ಎಲ್ಲಾ ಸಹಾಯ ಮಾಡ್ತೇನೆ ಅಂತಾ ಸಿಎಂ ಹೇಳಿದ್ರು.
ಸ್ಟಾಪ್ ಲಾಗ್ ಗೇಟ್ ಅಳವಡಿಸೋಕೆ ಬೃಹತ್ ಕ್ರೇನ್ ಗಳು ಬೇಕಿತ್ತು.
ಆ ಸಲಕರಣೆ ಇರೋದು ಜಿಂದಾಲ್ ನಲ್ಲಿ ಮಾತ್ರ. ಆದ್ರೂ ನಮಗೆ ಎರಡು ದಿನ ವ್ಯರ್ಥ ಆಯ್ತು.
ಆಗ ತುಂಬಾ ಅಪ್ಸೆಟ್ ಆಯ್ತು.
ಮೇಲೆ ಸ್ಕೈ ವಾಕ್ ಹಾಗೂ ಭೀಮ್ ತೆಗೆಯೋಕೆ ಕೇಂದ್ರದ ಫರ್ಮೀಷನ್ ಇಲ್ಲ ಅಂದ್ರು. ತುಂಬಾ ಅಪ್ಸೆಟ್ ಆಗಿದ್ವಿ. ಸಿಎಂ ಅವ್ರಿಗೆ ಹೇಳಿ ರಿಸ್ಕ್ ನಲ್ಲಿ ಸ್ಕೈ ವಾಕ್ ತೆಗೆತೀವಿ ಅಂತಾ ಹೇಳಿ ಫರ್ಮೀಷನ್ ತಗೊಳ್ಳೋದಕ್ಕೆ ಹೇಳಿದ್ವಿ.
ಆಗ ಸಿಎಂ ನೀವು ಮಾಡಿ ಅಂತಾ ಹೇಳಿ ಫರ್ಮೀಷನ್ ತಗೊಂಡ್ರು.
ಆಮೇಲೆ ಕೆಲಸ ಆರಂಭ ಮಾಡಿದ್ವಿ.
ನಾವು ಸಕ್ಸಸ್ ಆದ್ವಿ. ಸೋಮವಾರದೊಳಗೆ ಎಲ್ಲಾ ಕೆಲಸ ಮುಗಿಸ್ತೇವೆ. ರೈತರಿಗೆ ಎರಡು ಬೆಳೆ ನೀರು ಹಾಗೂ ಕುಡಿಯೋದಕ್ಕೂ ನೀರು ಲಭ್ಯವಾಗ್ತದೆ.
105 ಟಿಎಂಸಿ ನೀರು ಸಂಗ್ರಹ ಆಗುತ್ತೆ ಯಾವುದೇ ಆತಂಕ ಬೇಡ ಎಂದ ಕನ್ನಯ್ಯ ನಾಯ್ಡು ಹೇಳಿದರು. 45 ವರ್ಷದ ಬಳಿಕ ಗೇಟ್ ಗಳನ್ನ ಚೇಂಜ್ ಮಾಡಬೇಕು. ಅದನ್ನ ಸಿಎಂ ಅವ್ರಿಗೆ ಹೇಳಿದ್ದೇನೆ.‌ ಗೇಟ್ ಚೇಂಜ್ ಮಾಡಿದ್ರೆ ಈ ಸಮಸ್ಯೆ ಆಗ್ತಿರಲಿಲ್ಲ ಎಂದ ಕನ್ನಯ್ಯ ನಾಯ್ಡು,
ಇವತ್ತು ಮೂರು ಎಲಿಮೆಂಟ್ ಕೂಡಿಸೋದನ್ನ ಮುಗಿಸಿ ನಾನು ಹೈದ್ರಾಬಾದ್ ಗೆ ಹೋಗ್ತೇನೆ.
ಎರಡು ಎಲಿಮೆಂಟ್ ಹಾಕಿದ್ರೆ 105 ಟಿಎಂಸಿ ನೀರು ಸ್ಟೋರ್ ಆಗುತ್ತೆ.
ಸೋಮವಾರಕ್ಕೆ ಮಿಕ್ಕಿದ್ದು ಕೆಲಸ ಮುಗಿಯುತ್ತೆ. ಆಗ 105 ಟಿಎಂಸಿ ನೀರು ಸಂಗ್ರಹ ಆಗುತ್ತೆ ಎಂದು ಕನ್ಹಯ್ಯ ನಾಯ್ಡು ಹೇಳಿದರು.