ಭಗವಾನ್ ಮಾತಿಗೆ ಯಾರೂ ಮಹತ್ವ ಕೊಡಬಾರದು
ಗದಗ: ಪ್ರೊ.ಕೆ. ಎಸ್ ಭಗವಾನ್ ತಾಯಿ ಚಾಮುಂಡೇಶ್ವರಿ ವಿಚಾರದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತಿಗೆ ಯಾರೂ ಮಹತ್ವ ಕೊಟ್ಟಿಲ್ಲ, ಕೊಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರೊ. ಭಗವಾನ್ ಅವರು ಹೆಸರಿಗೆ ತಕ್ಕಂಗೆ ಭಗವಂತನ ಮೇಲೆ ನಂಬಿಕೆ ಇಟ್ಟಿದ್ದಾರೆ ಇಲ್ಲಾ ನೋಡಿ, ಭಗವಂತನ ಮೇಲೆ ನಂಬಿಕೆ ಇಲ್ಲಾ ಅಂದರೆ, ಭಗವಾನ್ ಅಂತ ಹೆಸರು ಇಟ್ಟಿಕೊಂಡಿದ್ದೆ ಅಪಾರ್ಥವಾಗಿದೆ ಎಂದು ಹೇಳಿದರು.
ಒಂದು ಧರ್ಮದ ವಿರುದ್ಧ ಮಾತನಾಡುವುದು ಯಾವುದೇ ಮಾನವೀಯ ಧರ್ಮವಿಲ್ಲ ಚಾಮುಂಡೇಶ್ವರಿ ಕಾಲ್ಪನಿಕ ಅಂತ ಹೇಳುತ್ತಾರೆ. ಚಾಮುಂಡೇಶ್ವರಿ ಕಾಲ್ಪನಿಕ ಅಂದರೆ, ಮಹಿಷಾಸುರನು ಕಾಲ್ಪನಿಕನಾ? ಮಹಿಷಾಸುರನ ಆರಾಧನೆ ಮಾಡುತ್ತಾರೆ. ಇತರಹ ದ್ವಂದ್ವ ವಿಪರ್ಯಾಸದಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಇದಕ್ಕೆ ಯಾರೂ ಮಹತ್ವ ಕೊಟ್ಟಿಲ್ಲ. ಯಾರೂ ಕೊಡಬಾರದು. ವಾಸ್ತವ ಅಂಶ ಗೊತ್ತಿದ್ದರೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಶ್ರೀರಾಮನ ಬಗ್ಗೆ ಹಿಂದೇ ಏನು ಮಾತಾಡಿದ್ದರು, ಸಮಾಜದಲ್ಲಿ ಕ್ಷೋಭೆ ಉಂಟುಮಾಡುವ ಕೆಲವು ಶಕ್ತಿಗಳಿವೆ. ಸಮಾಜ ಇದನ್ನು ಅರ್ಥ ಮಾಡಿಕೊಂಡಿದೆ. ಹೀಗಾಗಿ ಯಾರು ಮಹತ್ವ ಕೊಡುತ್ತಿಲ್ಲ ಎಂದು ಬೊಮ್ಮಾಯಿ ಹೇಳಿದರು.