For the best experience, open
https://m.samyuktakarnataka.in
on your mobile browser.

ಭದ್ರಕೋಟೆ ಉಳಿಸಿ ಕೊಂಡ ಬಿಜೆಪಿ: ನಿವೃತ್ತ ಸೈನಿಕನಿಗೆ ೧.೪೭ ಲಕ್ಷ ಅಂತರದ ಗೆಲುವು

04:53 PM Jun 04, 2024 IST | Samyukta Karnataka
ಭದ್ರಕೋಟೆ ಉಳಿಸಿ ಕೊಂಡ ಬಿಜೆಪಿ  ನಿವೃತ್ತ ಸೈನಿಕನಿಗೆ ೧ ೪೭ ಲಕ್ಷ ಅಂತರದ ಗೆಲುವು

ಮಂಗಳೂರು: ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಮತ್ತೆ ಕಮಲ ಅರಳುವ ಮೂಲಕ ಬಿಜೆಪಿ ಗೆಲುವಿನ ನಗೆ ಬೀರಿದೆ ಈ ಕುರಿತು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕಾಂಗ್ರೆಸ್ ಅಭ್ಯರ್ಥಿ ಆರ್ ಪದ್ಮರಾಜ್ ಅವರನ್ನು ಪರಾಭವಗೊಳಿಸಿದ್ದಾರೆ. ಚೌಟ ಗೆಲುವು ಸಾಧಿಸುತ್ತಿದ್ದಂತೆ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಬಳಿಕ ಮಾತನಾಡಿದ ಚೌಟ ‘ಇದು ಕಾರ್ಯಕರ್ತರು, ಹಿಂದುತ್ವ, ಪಕ್ಷದ ಜಯವಾಗಿದ್ದು. ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕಾರ್ಯಕರ್ತರ ಸಹಕಾರದೊಂದಿಗೆ ಹಿಂದುತ್ವಕ್ಕೆ ಬದ್ದತೆ, ಅಭಿವೃದ್ದಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಹೇಳಿದರು.
ಫಲಿತಾಂಶದ ಆರಂಭದಿಂದಲೂ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ಅವರು ಮುನ್ನಡೆಯನ್ನು ಸಾಧಿಸಿಕೊಂಡು ಬಂದಿದ್ದು ಕೊನೆಯ ಹಂತದಲ್ಲಿ ಕಾಂಗ್ರೆಸ್ ನ ಪದ್ಮರಾಜ ಆರ್. ಪೂಜಾರಿ ಅವರನ್ನು ಲಕ್ಷಕ್ಕೂ ಅಧಿಕ ಮತಗಳಿಗಿಂತ ಮುನ್ಮಡೆ ಸಾಧಿಸಿ ಗೆಲುವು ಸಾಧಿಸಿದ್ದಾರೆ ಇದರ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಸಿಹಿ ತಿಂಡಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಶಾಸಕರಾದ ಡಾ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ. ದ. ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಪಕ್ಷದ ಮುಖಂಡರು , ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಮತ ಎಣಿಕ ಕೇಂದ್ರದ ಎದುರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಕಾಂಗ್ರೆಸ್ ಅಭ್ಯರ್ಥಿಯನ್ನು ೧,೪೭, ೯೦೮ ಮತಗಳ ಅಂತರದಿಂದ ಸೋಲಿಸಿದ್ದಾರೆ. ೭,೫೯,೩೦೫, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ೬೧೧೩೯೭ ಮತಗಳನ್ನು ಪಡೆದಿದ್ದಾರೆ. ವಿಶೇಷವೆಂದರೆ ೨೩,೫೧೫ ನೋಟಾ ಮತಗಳು ಚಲಾವಣೆಯಾಗಿರುವುದು.