ಭಾಗ್ಯನಗರಕ್ಕೆ ಬೇಕು ಸರ್ಕಾರಿ ಪದವಿ ಕಾಲೇಜು ಅಭಿಯಾನ
ಕೊಪ್ಪಳ: ಭಾಗ್ಯನಗರಕ್ಕೆ ಬೇಕು ಸರ್ಕಾರಿ ಪದವಿ ಕಾಲೇಜು ಅಭಿಯಾನ ಆರಂಭವಾಗಿದ್ದು, ಇದಕ್ಕೆ ರೂಪರೇಷಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ ಹೇಳಿದರು.
ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ 'ಭಾಗ್ಯನಗರಕ್ಕೆ ಬೇಕು ಪದವಿ ಕಾಲೇಜು ಭಾಗ್ಯ' ಎಂಬ ವಿಶೇಷ ವರದಿ ಪ್ರಕಟವಾಗಿದ್ದು, ಈ ಹಿನ್ನಲೆ ನಗರ ಸಮೀಪದ ಭಾಗ್ಯನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಭಾಗ್ಯನಗರಕ್ಕೆ ಬೇಕು ಸರ್ಕಾರಿ ಪದವಿ ಕಾಲೇಜು ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಾತನಾಡಿ, ಶೈಕ್ಷಣಿಕವಾದ ಹಿನ್ನಲೆ ಭಾಗ್ಯನಗರಕ್ಕಿದೆ. ಕೊಪ್ಪಳದಿಂದ ಭಾಗ್ಯನಗರಕ್ಕೆ ಓದಲು ವಿದ್ಯಾರ್ಥಿಗಳು ಬರುತ್ತಾರೆ. ಪಿಯು ನಂತರ ಓದುವವರ ಪ್ರಮಾಣ ಕ್ಷೀಣಿಸಿದೆ. ಶೈಕ್ಷಣಿಕ ಅವಶ್ಯಕತೆಗಳನ್ನು ಸರ್ಕಾರವೇ ಪೂರೈಸಬೇಕು. ಸರ್ಕಾರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ಮಾಡಬೇಕು. ಮುಂದಿನ ವರ್ಷವೇ ಆಗಬೇಕು. ಭಾಗ್ಯನಗರದವರು ಬೇಡುವುದಿಲ್ಲ, ಬೇಡಿದರೆ ಬಿಡುವುದೂ ಇಲ್ಲ ಎಂದರು. ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ತುಕಾರಾಮಪ್ಪ ಗಡಾದ ಅಧ್ಯಕ್ಷತೆ ವಹಿಸಿದ್ದರು.
ಅಭಿಯಾನದ ನೇತೃತ್ವ ವಹಿಸಿದ್ದ ಕೃಷ್ಣ ಇಟ್ಟಂಗಿ ಪ್ರಾಸ್ತಾವಿಕ ಮಾತನಾಡಿದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನುರಸಾಬ್ ಬೈರಾಪುರ, ಹಿರಿಯ ವಕೀಲ ರಾಘವೇಂದ್ರ ಪಾನಘಂಟಿ, ಶಿಕ್ಷಣ ಪ್ರೇಮಿ ದಾನಪ್ಪ ಜಿ. ಕವಲೂರು, ಸಾಹಿತಿ ಡಿ.ಎಂ.ಬಡಿಗೇರ್, ಪ.ಪಂ.ಸದಸ್ಯರಾದ ರಮೇಶ ಹ್ಯಾಟಿ, ಮೋಹನ ಅರಕಲ್, ವಾಸುದೇವ ಮೇಘರಾಜ್, ಮುಖಂಡರಾದ ಕೊಟ್ರೇಶ ಶೇಡ್ಮಿ, ಸುರೇಶ ದರಗದಕಟ್ಟಿ ಇದ್ದರು.