For the best experience, open
https://m.samyuktakarnataka.in
on your mobile browser.

ಭಾರತದ ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ಇನ್ನಿಲ್ಲ

01:22 PM Aug 01, 2024 IST | Samyukta Karnataka
ಭಾರತದ ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಾಡ್ ಇನ್ನಿಲ್ಲ

ಹೈದರಾಬಾದ್: ಭಾರತದ ಮಾಜಿ ಕ್ರಿಕೆಟ್​ ಆಟಗಾರ, ಕೋಚ್​ ಆಗಿದ್ದ ಅಂಶುಮನ್​ ಗಾಯಕ್ವಾಡ್ ಕಳೆದ ರಾತ್ರಿ ನಿಧನರಾಗಿದ್ದಾರೆ.
71 ವರ್ಷ ತುಂಬಿದ್ದ ಅಂಶುಮಾನ್ ಗಾಯಕ್ವಾಡ್ ಭಾರತಕ್ಕಾಗಿ ​​​​​​ 40 ಟೆಸ್ಟ್‌ಗಳಲ್ಲಿ ಆಡಿದ್ದು, ಒಟ್ಟು 1985 ರನ್​​ ಗಳಿಸಿದ್ದರು. 15 ODI ಪಂದ್ಯಗಳಲ್ಲಿ 269 ರನ್​ ಗಳಿಸಿದ್ದರು. 269 ಪಸ್ಟ್​ ಕ್ಲಾಸ್​ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 12,136 ರನ್​ ಬಾರಿಸಿದ್ದರು. 225 ಅವರ ಅತ್ಯಧಿಕ ಸ್ಕೋರ್. ಗಾಯಕ್ವಾಡ್ ಭಾರತ ತಂಡದ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.