ಭಾರತದ ಮೊದಲ ಹೈಬ್ರಿಡ್ ಮರುಬಳಕೆ ರಾಕೆಟ್ ಉಡಾವಣೆ
01:50 PM Aug 24, 2024 IST | Samyukta Karnataka
ಚೆನ್ನೈ: ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ಅನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಕಂಪನಿ ಸ್ಪೇಸ್ ಝೋನ್ ಇಂಡಿಯಾವು ಮಾರ್ಟಿನ್ ಗ್ರೂಪ್ ಜತೆ ಸೇರಿ ಅಭಿವೃದ್ಧಿಪಡಿಸಿದ ಈ ರಾಕೆಟ್ನ್ನು ಚೆನ್ನೈಯ ತಿರುವಿದಂಧೈನಲ್ಲಿರುವ ಟಿಟಿಡಿಸಿ ಮೈದಾನದಿಂದ ಉಡಾವಣೆ ಮಾಡಲಾಯಿತು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಇದಾಗಿದೆ . ರೂಮಿ 1 (RHUMI 1) ಹೆಸರಿನ ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ 3 ಕ್ಯೂಬ್ ಉಪಗ್ರಹಗಳು ಮತ್ತು 50 ಪಿಐಸಿಒ (PICO) ಉಪಗ್ರಹಗಳನ್ನು ಉಪಕಕ್ಷೆಯ ಪಥಕ್ಕೆ ಕೊಂಡೊಯ್ಯಲಿದೆ. ರಾಕೆಟ್ ಅನ್ನು ಮೊಬೈಲ್ ಲಾಂಚರ್ ಬಳಸಿ ಸಬ್ ಆರ್ಬಿಟಲ್ ಪಥಕ್ಕೆ ಉಡಾಯಿಸಲಾಯಿತು. ಈ ಉಪಗ್ರಹಗಳು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸಂಶೋಧನಾ ಉದ್ದೇಶಗಳಿಗಾಗಿ ಡೇಟಾವನ್ನು ಸಂಗ್ರಹಿಸಲಿವೆ.