For the best experience, open
https://m.samyuktakarnataka.in
on your mobile browser.

ಭಾರತೀಯ ಚೆಸ್ ಲೋಕದಲ್ಲಿ ನವ ಮನ್ವಂತರ

10:05 PM Sep 23, 2024 IST | Samyukta Karnataka
ಭಾರತೀಯ ಚೆಸ್ ಲೋಕದಲ್ಲಿ ನವ ಮನ್ವಂತರ

ಬುಡಾಪೆಸ್ಟ್(ಹಂಗೇರಿ): ಇಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಚಿನ್ನದ ಪದಕ ಬಾಚಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿವೆ. ಇದರೊಂದಿಗೆ ಭಾರತೀಯ ಚೆಸ್‌ನಲ್ಲಿ ನವ ಮನ್ವಂತರ ಆರಂಭವಾದಂತಾಯಿತು
ಭಾರತದ ಪುರುಷರ ತಂಡ ಸ್ಲೊವೇನಿಯಾವನ್ನು ೩.೫-೦.೫ ಅಂತರದಿಂದ ಸೋಲಿಸಿದರೆ, ಮಹಿಳಾ ತಂಡ ೧೧ನೇ ಮತ್ತು ಅಂತಿಮ ಸುತ್ತಿನಲ್ಲಿ ಅಜೆರ್ಬೈಜಾನ್ ಅನ್ನು ಅದೇ ಅಂತರದಿಂದ ಪರಾಜಯಗೊಳಿಸಿತು.
ಆ ಮೂಲಕ ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಭಾರತವು ಒಂದೇ ಚೆಸ್ ಒಲಿಂಪಿಯಾಡ್‌ನಲ್ಲಿ ಪುರುಷರ ಮತ್ತು ಮಹಿಳೆಯರ ಚಿನ್ನದ ಪದಕಗಳನ್ನು ಗೆದ್ದ ಮೂರನೇ ರಾಷ್ಟç ಎಂಬ ಗೌರವಕ್ಕೆ ಪಾತ್ರವಾಯಿತು.
ಭಾರತೀಯ ಪುರುಷರು ೨೦೧೪ ಮತ್ತು ೨೦೨೨ರಲ್ಲಿ ಎರಡು ಕಂಚಿನ ಪದಕಗಳನ್ನು ಗೆದಿದ್ದು ಹಾಗೂ ಮಹಿಳೆಯರ ತಂಡ ೨೦೨೨ ರಲ್ಲಿ ಚೆನ್ನೈನಲ್ಲಿ ಕಂಚಿನ ಪದಕ ಗೆದ್ದಿದ್ದು ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಈ ವರೆಗಿನ ಉತ್ತಮ ಸಾಧನೆ ಎನಿಸಿತ್ತು.
ದೊಮ್ಮರಾಜು ಗುಕೇಶ್, ಅರ್ಜುನ್ ಈಗೈಸಿ, ಪ್ರಗ್ನಾನಂದ ರಮೇಶಬಾಬು, ವಿದಿತ್ ಗುಜರಾತಿ ಮತ್ತು ಹರಿಕೃಷ್ಣ ಪೆಂಟಾಲ ಅವರನ್ನೊಳಗೊಂಡ ಭಾರತದ ಪುರುಷರು ಆರಂಭದಿಂದಲೂ ಪ್ರಾಬಲ್ಯ ಮೆರೆದು ಆಡಿದ ೧೦ ಪಂದ್ಯಗಳನ್ನು ಗೆದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡು ಒಟ್ಟು ೨೧ ಅಂಕಗಳೊಂದಿಗೆ ಚಿನ್ನದ ಪದಕ ಬಾಚಿಕೊಂಡರು.
ಭಾರತದ ಪುರುಷರ ತಂಡ ಆಡಿದ ೪೪ ಪಂದ್ಯಗಳ ಪೈಕಿ ಒಂದು ಪಂದ್ಯದಲ್ಲಿ ಮಾತ್ರ ಸೊಲು ಅನುಭವಿಸಿತು. ಪ್ರಗ್ನಾನಂದ, ಅಂತಿಮ ಸುತ್ತಿನಲ್ಲಿ ಯುಎಸ್‌ನ ವೆಸ್ಲಿ ಸೋ ಅವರ ಕೈಯಲ್ಲಿ ಸೋಲು ಅನುಭವಿಸಿದರು.
ಮಹಿಳೆಯರ ವಿಭಾಗದಲ್ಲಿ ದಿವ್ಯಾ ದೇಶ್‌ಮುಖ್, ವಂತಿಕಾ ಅಗರವಾಲ್, ಹರಿಕಾ ದ್ರೋಣವಲ್ಲಿ, ವೈಶಾಲಿ ರಮೇಶ್‌ಬಾಬು ಮತ್ತು ತಾನಿಯಾ ಸಚ್‌ದೇವ್ ಅವರನ್ನೊಳಗೊಂಡ ಭಾರತ ತಂಡ ಒಟ್ಟು ೧೯ ಪಾಯಿಂಟ್‌ಗಳನ್ನು ಗಳಿಸಿ ಕಜಕಸ್ತಾನ ತಂಡವನ್ನು ಹಿಂದಿಕ್ಕಿ ಬಂಗಾರದ ಪದಕ ಬಾಚಿಕೊಂಡಿತು.
ಭಾರತದ ಪುರುಷರ ತಂಡ ಮುಕ್ತ ವಿಭಾಗದಲ್ಲಿ ಹಾಗೂ ಮಹಿಳೆಯರು ತಂಡ ವಿಭಾಗದಲ್ಲಿ ಚಿನ್ನದ ಪದಕ ಪಡೆದರು. ಜೊತೆಗೆ ಗುಕೇಶ್, ಅರ್ಜುನ್, ದಿವ್ಯಾ ಮತ್ತು ವಾಂತಿಕಾ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಸ್ವರ್ಣ ಪದಕ ಪಡೆಯುವ ಮೂಲಕ ರಾಷ್ಟ್ರದ ಕೀರ್ತಿ ಹೆಚ್ಚಿಸಿದರು.

Tags :