ಭಾರತ ಜಾಗತಿಕ ಅನಿಮೇಷನ್ ಪವರ್ ಹೌಸ್
ಸ್ಮಾರ್ಟ್‌ಫೋನ್‌ಗಳಿಂದ ಸಿನಿಮಾ ಪರದೆಯವರೆಗೆ, ಗೇಮಿಂಗ್ ಕನ್ಸೋಲ್‌ಗಳಿಂದ ವರ್ಚುವಲ್ ರಿಯಾಲಿಟಿವರೆಗೆ, ಅನಿಮೇಷನ್ ಎಲ್ಲೆಡೆ ಇದೆ
ನವದೆಹಲಿ: ಭಾರತವನ್ನು ಜಾಗತಿಕ ಅನಿಮೇಷನ್ ಶಕ್ತಿ ಕೇಂದ್ರವನ್ನಾಗಿ ರೂಪಿಸಲು ಸಂಕಲ್ಪಗೈಯ್ಯುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
115ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ವೋಕಲ್ ಫಾರ್ ಲೋಕಲ್ ಮೂಲಕ ಸ್ಥಳೀಯ ವಸ್ತುಗಳನ್ನು ಮಾತ್ರ ಖರೀದಿಸಬೇಕಾಗಿದೆ. ಇದೀಗ ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್ ಆಗಿ ಮಾರ್ಪಟ್ಟಿದೆ. ಇಲ್ಲಿ, ಪ್ರತಿಯೊಬ್ಬ ನಾಗರಿಕ ಹೊಸ ವಿಷಯಗಳ ಸಂಶೋಧಕನಾಗಿದ್ದಾನೆ. ಎಲ್ಲಾ ಅವಕಾಶಗಳ ಸದುಪಯೋಗ ಪಡಿಸಿಕೊಂಡು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಸವಾಲನ್ನು ಸ್ವೀಕರಿಸಲಾಗಿದೆ. ಹಾಗಾಗಿ, ದೇಶದ ಜನ ಪ್ರಯತ್ನಿಸಿ ದೇಶವನ್ನು ನಾವೀನ್ಯತೆಯ ಜಾಗತಿಕ ಶಕ್ತಿಯ ಕೇಂದ್ರವನ್ನಾಗಿ ಬಲಪಡಿಸಬೇಕಾದ ಅಗತ್ಯವಿದೆ, ಭಾರತವು ಅನಿಮೇಷನ್ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನು ತರಲಿದೆ, ದೇಶದಲ್ಲಿ ಸೃಜನಶೀಲತೆಯ ಅಲೆ ನಡೆಯುತ್ತಿದೆ, ಟಿವಿಯಲ್ಲಿ ಛೋಟಾ ಭೀಮ್ ಬಂದಾಗ, ಮಕ್ಕಳು ತುಂಬಾ ಸಂತೋಷವಾಗಿದ್ದರು, ನಮ್ಮ ಇತರ ಅನಿಮೇಟೆಡ್ ಧಾರಾವಾಹಿಗಳಾದ ಮೋಟು-ಪತ್ಲೂ, ಹನುಮಾನ್ ಜನಪ್ರಿಯವಾಗಿವೆ. ಪ್ರಪಂಚದಾದ್ಯಂತ ಭಾರತದ ಅನಿಮೇಷನ್ ಜನಪ್ರಿಯವಾಗಿದೆ, ಇಂದು ಅನಿಮೇಷನ್ ಕ್ಷೇತ್ರವು ಇತರ ಉದ್ಯಮಗಳಿಗೆ ಬಲವನ್ನು ನೀಡುವ ಉದ್ಯಮದ ರೂಪವನ್ನು ಪಡೆದುಕೊಂಡಿದೆ, ವಿಆರ್ ಪ್ರವಾಸೋದ್ಯಮವು ಇತ್ತೀಚಿನ ದಿನಗಳಲ್ಲಿ ಬಹಳ ಪ್ರಸಿದ್ಧವಾಗಿದೆ. ನೀವು ವರ್ಚುವಲ್ ಪ್ರವಾಸದ ಮೂಲಕ ಅಂಜಾತ ಗುಹೆಗಳಿಗೆ ಭೇಟಿ ನೀಡಬಹುದು. ನೀವು ಇಲ್ಲಿ ನಡೆಯಬಹುದು. ಭಾರತವು ಅನಿಮೇಷನ್ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸುವ ಹಾದಿಯಲ್ಲಿದೆ ಎಂದರು.