For the best experience, open
https://m.samyuktakarnataka.in
on your mobile browser.

ಭೂಕುಸಿತ: ಜಲವಿದ್ಯುತ್ ಘಟಕಕ್ಕೆ ಹಾನಿ

02:24 PM Aug 20, 2024 IST | Samyukta Karnataka
ಭೂಕುಸಿತ  ಜಲವಿದ್ಯುತ್ ಘಟಕಕ್ಕೆ ಹಾನಿ

ತೀಸ್ತಾ ಅಣೆಕಟ್ಟು ಹಾನಿಯಾಗಿದ್ದು, ಭೂಕುಸಿತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಿಕ್ಕಿಂ: ತೀಸ್ತಾದಲ್ಲಿ ಉಂಟಾದ ಭೂಕುಸಿತದಿಂದ ಜಲವಿದ್ಯುತ್ ಘಟಕ ಹಾನಿಗೊಳಗಾದ ಘಟನೆ ನಡೆದಿದೆ.
ಕಳೆದ ಕೆಲವು ವಾರಗಳಿಂದ ಜಲವಿದ್ಯುತ್ ಸ್ಥಾವರದ ಬಳಿ ಹಲವಾರು ಭೂಕುಸಿತಗಳು ಸಂಭವಿಸಿದ ಪರಿಣಾಮವಾಗಿ, 510 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸುವ ಈ ಸ್ಥಾವರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿತ್ತು. ಸರಣಿ ಕುಸಿತದಿಂದಾಗಿ ಸುರಕ್ಷತಾ ಕ್ರಮವಾಗಿ ಕಾರ್ಮಿಕರನ್ನು ಮೊದಲೇ ಸ್ಥಳಾಂತರಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಜಲವಿದ್ಯುತ್ ಘಟಕದ ಮೇಲೆ ಪರ್ವತದ ಹೆಚ್ಚಿನ ಭಾಗ ಕುಸಿದಿದೆ. ಇದರಿಂದಾಗಿ ತೀಸ್ತಾ ಸ್ಟೇಜ್ 5 ಅಣೆಕಟ್ಟು ಹಾನಿಯಾಗಿದೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭೂಕುಸಿತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಜಲವಿದ್ಯುತ್ ಸ್ಥಾವರದ ಮೇಲೆ ಗುಡ್ಡದ ಬಹುಭಾಗ ಕುಸಿದು ಬಿದ್ದಿದ್ದರಿಂದ ಸ್ಥಳೀಯರಲ್ಲಿ ಭೀತಿ ಆವರಿಸಿದೆ. ತೀಸ್ತಾದ ಈ ಅಣೆಕಟ್ಟು 2023 ರಲ್ಲಿ ಸಿಕ್ಕಿಂನಲ್ಲಿ ಲೋನಾಕೆ ಗ್ಲೇಶಿಯಲ್ ಸರೋವರ ಒಡೆದಾಗ ಸಂಭವಿಸಿದ ದುರಂತದಲ್ಲಿ ಹಾನಿಗೊಳಗಾಗಿತ್ತು. ಅಂದಿನಿಂದ ಅಣೆಕಟ್ಟು ಶಿಥಿಲಾವಸ್ಥೆಯಲ್ಲಿದೆ. ಆದಾಗ್ಯೂ, ಜಲವಿದ್ಯುತ್ ಸ್ಥಾವರವು ಇನ್ನೂ ಕಾರ್ಯನಿರ್ವಹಿಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ, ಪದೇ ಪದೇ ಕುಸಿದು ಬೀಳುತ್ತಿದ್ದರಿಂದ ಸುರಕ್ಷತೆಗಾಗಿ ಕಾರ್ಮಿಕರನ್ನು ಮೊದಲೇ ಸ್ಥಳಾಂತರಿಸಲಾಯಿತು. ಇದರಿಂದ ಭಾರಿ ಅಪಾಯ ತಪ್ಪಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಕಾರ್ಮಿಕರು.

Tags :