For the best experience, open
https://m.samyuktakarnataka.in
on your mobile browser.

ಭೂಸ್ಪರ್ಶ ಮಾಡಿದ ಹವಾಮಾನ ಉಪಕರಣ

12:03 PM Aug 02, 2024 IST | Samyukta Karnataka
ಭೂಸ್ಪರ್ಶ ಮಾಡಿದ ಹವಾಮಾನ ಉಪಕರಣ

ವಿಜಯಪುರ: ಬಾಹ್ಯಾಕಾಶ ಸಾಧನವೊಂದು ಜಿಲ್ಲೆಯಲ್ಲಿ ನೆಲಕ್ಕೆ ಅಪ್ಪಳಿಸಿದ ಘಟನೆ ನಡೆದಿದೆ.
ಜಿಲ್ಲೆಯ ಚಡಚಣ ತಾಲೂಕಿನ ಮರಗೂರ ಬಳಿ ಹೈದರಾಬಾದ್ ಮೂಲದ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ಹಾರಿಸಿರುವ ಹವಾಮಾನ ಅಧ್ಯಯನ ವೈಜ್ಞಾನಿಕ ಉಪಕರಣ ಪ್ಯಾರಾಚೂಟ್‌ನ ನೆರವಿನಿಂದ ಚಡಚಣ ತಾಲ್ಲೂಕಿನ ಧೂಳಖೇಡ ಗ್ರಾಮದ ಜಮೀನಿನಲ್ಲಿ ಬಂದಿಳಿದಿದೆ. ಜಿಲ್ಲಾಡಳಿತವು ಸಂಬಂಧಿತ ಸಂಸ್ಥೆಯನ್ನು ಸಂಪರ್ಕಿಸಿ ಈಗಾಗಲೇ ಮಾಹಿತಿ ಒದಗಿಸಿದ್ದು, ಸಂಸ್ಥೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಲಿದೆ, ಇನ್ನು ಈ ಕುರಿತಂತೆ ಜಿಲ್ಲಾಡಳಿತ ಮನವಿ ಮಾಡಿದ್ದು ಕೇಂದ್ರ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿನ ಹೈದರಾಬಾದ್ ನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್) ಹವಾಮಾನ ಹಾಗೂ ವಾತಾವರಣ ಅಧ್ಯಯನಕ್ಕಾಗಿ ಉಡಾವಣೆ ಮಾಡಿದ್ದ ಪೆಲೋಡ್ ಹೆಸರಿನ ಹವಾಮಾನ ಅಧ್ಯಯನಾಶೀಲ ವೈಜ್ಞಾನಿಕ ಉಪಕರಣ ಪ್ಯಾರಾಚೂಟ್ ನ ನೆರವಿನಿಂದ ಚಡಚಣ ತಾಲೂಕಿನ ಗ್ರಾಮವೊಂದರ ಜಮೀನಿನಲ್ಲಿ ಬಂದು ಇಳಿದಿದೆ ಎಂದಿದ್ದಾರೆ.