ಭ್ರಷ್ಟಾಚಾರ ಇಲ್ಲದ ಇಲಾಖೆಯಾದರೂ ಇದೆಯಾ?
ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾಡದ ಒಬ್ಬ ಸಚಿವ, ಒಬ್ಬ ಶಾಸಕರಾದರೂ ಇದ್ದಾರೆಯೇ?
ಬೆಂಗಳೂರು: ಭ್ರಷ್ಟಾಚಾರ ಇಲ್ಲದ ಯಾವುದಾದರೂ ಇಲಾಖೆಯಾದರೂ ಇದೆಯಾ? ಎಂದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಬಾಗಲಕೋಟೆ ಕಾಂಗ್ರೆಸ್ ಶಾಸಕ ಎಚ್.ವೈ ಮೇಟಿ ಅವರ ಅಳಿಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಕುಮಾರ ಯರಗಲ್ ಅವರು ತಮ್ಮ ಅಧಿಕಾರಾವಧಿಯಲ್ಲಿ 88ಕ್ಕೂ ಹೆಚ್ಚು ಹುದ್ದೆಗಳನ್ನು ನಿಯಮ ಬಾಹಿರವಾಗಿ ನೇಮಕಾತಿ ಮಾಡಿಕೊಂಡಿದ್ದು, ಹುದ್ದೆಗಳನ್ನು ಹಣಕ್ಕಾಗಿ ಮಾರಿಕೊಂಡು ಬೃಹತ್ ಭ್ರಷ್ಟಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದ ಯಾವುದಾದರೂ ಇಂದು ಇಲಾಖೆಯಾದರೂ ಇದೆಯಾ? ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾಡದ ಒಬ್ಬ ಸಚಿವ, ಒಬ್ಬ ಶಾಸಕರಾದರೂ ಇದ್ದಾರೆಯೇ? ಸಿದ್ದರಾಮಯ್ಯನವರೇ ನಿಮ್ಮಂತಹ ಕಡು ಭ್ರಷ್ಟ ಮುಖ್ಯಮಂತ್ರಿ, ನಿಮ್ಮ ಸರ್ಕಾರದಂತಹ ಕಡು ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದ ಇತಿಹಾಸದಲ್ಲೇ ಮತ್ತೊಂದಿರಲಿಕ್ಕಿಲ್ಲ. ಸ್ವತಃ ಮುಖ್ಯಮಂತ್ರಿಗಳೇ ನೂರಾರು ಕೋಟಿ ಭ್ರಷ್ಟಾಚಾರ ಎಸಗಿ ಮೇಲ್ಪಂಕ್ತಿ ಹಾಕಿಕೊಟ್ಟಿರುವಾಗ ಇನ್ನು ಸಚಿವರು, ಶಾಸಕರು ಸುಮ್ಮನಿರುತ್ತಾರೆಯೇ? ದಯವಿಟ್ಟು ರಾಜೀನಾಮೆ ಕೊಟ್ಟು ತೊಲಗಿ. ಕರ್ನಾಟಕದ ಗೌರವ ಉಳಿಸಿ ಎಂದಿದ್ದಾರೆ.