ಮಂಗಳೂರಿಗೆ ಮಾದಕ ವಸ್ತು ಕೋಕೆನ್ ಪೂರೈಕೆ ಮಾಡುತ್ತಿದ್ದ ನೈಜೇರಿಯಾ ಪ್ರಜೆಯ ಸೆರೆ
ಮಂಗಳೂರು: ಮಂಗಳೂರಿಗೆ ಮಾದಕ ವಸ್ತು ಕೋಕೆನ್ ಪೂರೈಕೆ ಮಾಡುತ್ತಿದ್ದ ನೈಜೇರಿಯಾ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಗೋವಾ ರಾಜ್ಯದಿಂದ ಮಂಗಳೂರು ನಗರಕ್ಕೆ ನಿಷೇದಿತ ಮಾದಕ ವಸ್ತುವಾದ ಕೋಕೇನ್ ಮಾರಾಟ ಮಾಡುತ್ತಿದ್ದ ಪ್ರಸ್ತುತ ಗೋವಾದಲ್ಲಿ ವಾಸ್ತವ್ಯವಿರುವ ನೈಜೇರಿಯಾ ದೇಶದ ಪ್ರಜೆಯನ್ನು ಪತ್ತೆ ಹಚ್ಚಿ 30 ಗ್ರಾಂ ಕೋಕೆನ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾರ್ಚ್‌ನಲ್ಲಿ ಸೆರೆಸಿಕ್ಕ ಕೋಕೆನ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ಕೋಕೇನ್ ನೀಡಿದ ಗೋವಾದ ಡ್ರಗ್ ಪೆಡ್ಲರ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಗೋವಾ ರಾಜ್ಯದ ಉತ್ತರ ಗೋವಾದ ಕಾಲನ್ ಗೂಟ್ ಎಂಬಲ್ಲಿಗೆ ಆರೋಪಿ ಪತ್ತೆ ಬಗ್ಗೆ ಹೋಗಿ ನೈಜೇರಿಯಾ ದೇಶದ ಪ್ರಜೆ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ 30 ಗ್ರಾಂ ಕೋಕೇನ್, ಸಾಗಾಟಕ್ಕೆ ಉಪಯೋಗಿಸಿದ ಬೊಲೆನೋ ಕಾರು, 2 ಮೊಬೈಲ್ ಫೋನ್‌ಗಳು, 4500 ರೂ. ಹಣ, ಡಿಜಿಟಲ್ ತೂಕ ಮಾಪನವನ್ನು ವಶಕ್ಕೆ ಪಡೆದಿದ್ದಾರೆ.
ಈ ಆರೋಪಿ ನೈಜೇರಿಯಾ ದೇಶದವನಾಗಿದ್ದು, 2012ರಲ್ಲಿಯೇ ಭಾರತಕ್ಕೆ ವ್ಯಾಪಾರದ ವೀಸಾದಲ್ಲಿ ಬಂದು ಮುಂಬೈಯಲ್ಲಿ ಸುಮಾರು ಒಂದೂವರೆ ವರ್ಷ ವಾಸವಿದ್ದು ನಂತರ ಗೋವಾಕ್ಕೆ ಬಂದು ಗೋವಾದಲ್ಲಿ ವಾಸವಿದ್ದು ಮಾದಕ ವಸ್ತು ಮಾರಾಟ ಮಾಡುತ್ತಿರುವುದಾಗಿದೆ. ಈತನ ವಿರುದ್ಧ ಈಗಾಗಲೇ ಗೋವಾದಲ್ಲಿ ಒಟ್ಟು 3 ಮಾದಕ ವಸ್ತು ಮಾರಾಟ ಪ್ರಕರಣ ದಾಖಲಾಗಿದೆ.