For the best experience, open
https://m.samyuktakarnataka.in
on your mobile browser.

ಮಂಗಳೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಟ್ರೇಡ್ ಯೂನಿಯನ್ ವತಿಯಿಂದ ಪ್ರತಿಭಟನೆ

03:41 PM Sep 14, 2024 IST | Samyukta Karnataka
ಮಂಗಳೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಟ್ರೇಡ್ ಯೂನಿಯನ್ ವತಿಯಿಂದ ಪ್ರತಿಭಟನೆ
  ಅಖಿಲ ಭಾರತ ಯೂನಿಯನ್ ಬ್ಯಾಂಕ್  ಒಫ್  ಇಂಡಿಯಾ ಎಂಪ್ಲಾಯೀಸ್ ಅಸೋಸಿಯೇಷನ್ ​ ಹಾಗೂ  ಅಖಿಲ ಭಾರತ ಯೂನಿಯನ್  ಬ್ಯಾಂಕ್ ಆಫೀಸರ್ಸ್ ಫೆಡರೇಶನ್ ವತಿಯಿಂದ ಸೆಪ್ಟೆಂಬರ್ 27  ರಂದು ಉದ್ದೇಶಿತ  ಭಾರತಾದ್ಯಂತ ಬ್ಯಾಂಕ್ ಮುಷ್ಕರವನ್ನು  ಮ್ಯಾನೇಜ್‌ಮೆಂಟ್‌ಗೆ ತಿಳಿಸುವ ಸಲುವಾಗಿ ಸೆಪ್ಟೆಂಬರ್ 09 ರಂದು ಜಂಟಿ ಸಮಾಲೋಚನೆ ಸಭೆಯು ಜರಗಿತ್ತು.  ಬ್ಯಾಂಕ್‌ನ ನೌಕರರು ಮತ್ತು ಅಧಿಕಾರಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಘಗಳು ವಿವಿಧ ಸಂದರ್ಭಗಳಲ್ಲಿ ಮ್ಯಾನೇಜ್‌ಮೆಂಟ್‌ಗೆ ನೀಡಿದ್ದರೂ,  ಆದರೆ ಕಳೆದ ಎರಡು ವರ್ಷಗಳಿಂದ ಉಂಟಾಗಿರುವ ವಿವಿಧ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ನೀಡುವಲ್ಲಿ ಆಡಳಿತ ಮಂಡಳಿ  ಸಂಪೂರ್ಣ ವಿಫಲವಾಗಿದೆ.     ಪ್ರಮುಖವಾಗಿ  ಎರಡೂ ಟ್ರೇಡ್ ಯೂನಿಯನ್ ನ ಬೇಡಿಕೆಯಂತೆ ಸಿಬ್ಬಂದಿ ಕೊರತೆ ಮತ್ತು  ಅಪ್ರೆಂಟಿಸ್ ನೇಮಕಾತಿಯೆoಬ, ಅನಿಷ್ಟ ಪದ್ಧತಿಯು  ಯುವ ಸಮುದಾಯನ್ನು  ವಂಚಿಸುತ್ತಿರುವ  ಪ್ರಕ್ರಿಯೆಯನ್ನು ತಕ್ಷಣ ಕೈ ಬಿಡುವಂತೆ ಮ್ಯಾನೇಜ್‌ಮೆಂಟ್‌ನೊಂದಿಗೆ, ಹಾಗೂ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಅನೇಕ ಭಾರಿ ಪ್ರಯತ್ನಿಸಿದರೂ, ಯಾವುದೇ ಅರ್ಥಪೂರ್ಣ ಚರ್ಚೆಗೆ ಆಸ್ಪದ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ AIUBOF ಮತ್ತು AIUBEA ಯು ಬ್ಯಾಂಕ್ ನ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಿ  ಬ್ಯಾಂಕಿನ ಗ್ರಾಹಕರಿಗೆ  ಉತ್ತಮ ಸೇವೆ ನೀಡುವಲ್ಲಿ,  ನಮ್ಮೊಂದಿಗೆ ಸಹಕರಿಸುವಂತೆ ಒತ್ತಾಯಿಸಲಾಯಿತು.  ಈ ಸಂಬಂಧವಾಗಿ 12.09.2024 ರಂದು ಮಂಗಳೂರಿನ ಪಾಂಡೇಶ್ವರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ  ವಲಯ ಕಚೇರಿ ಮತ್ತು ಪ್ರಾದೇಶಿಕ ಕಛೇರಿಯ ಮುಂಭಾಗದಲ್ಲಿ ಬಹುಸಂಖ್ಯಾತ ಟ್ರೇಡ್ ಯೂನಿಯನ್ ವತಿಯಿಂದ ಪ್ರದರ್ಶನವನ್ನು ನಡೆಸಲಾಯಿತು.