For the best experience, open
https://m.samyuktakarnataka.in
on your mobile browser.

ಮಂಗಳೂರು ದಸರಾಗೆ ಅದ್ದೂರಿ ಚಾಲನೆ

01:37 PM Oct 03, 2024 IST | Samyukta Karnataka
ಮಂಗಳೂರು ದಸರಾಗೆ ಅದ್ದೂರಿ ಚಾಲನೆ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಮಂಗಳೂರು ದಸರಾ ಮಹೋತ್ಸವ ಉದ್ಘಾಟನೆಗೊಂಡಿತು.
ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಚಾಲನೆ ನೀಡಿದ್ದಾರೆ. ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾದ ಶಾರದಾ ಮಾತೆಯ ವಿಗ್ರಹವನ್ನು ದೇವಳದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಮಾಡಿಸಿ ದರ್ಬಾರ್ ಹಾಲ್‌ನಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಇದೇ ವೇಳೆ ಮಹಾ ಗಣಪತಿ ಸಹಿತ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಅ. 13 ರವರೆಗೆ ವಿಶೇಷ ಪೂಜೆ ಹಾಗೂ ಅಲಂಕಾರ ಸಹಿತ ಪೂಜಿಸಲಾಗುತ್ತದೆ. ಉದ್ಘಾಟನೆ ವೇಳೆ ಹುಲಿವೇಷಧಾರಿಗಳಿಂದ ಕುಣಿತ ಸೇವೆ ನಡೆಯಿತು. ಕುದ್ರೋಳಿ ಕ್ಷೇತ್ರವು ವಿಶೇಷ ಅಲಂಕಾರದೊಂದಿಗೆ ಕಂಗೊಳಿಸುತ್ತಿದ್ದು, ಮಂಗಳೂರು ನಗರವು ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಮಂಗಳೂರು ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಲು ಸಜ್ಜಾಗಿದೆ. ಅ. 13ರಂದು ಸಂಜೆ ಮೆರವಣಿಗೆ ಮೂಲಕ ಮಂಗಳೂರು ದಸರಾ ಸಮಾಪನೆಗೊಳ್ಳಲಿದೆ.
ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಕಳೆದ 34 ವರ್ಷಗಳಿಂದ ವಿಜೃಂಭಣೆಯ ದಸರಾ ಮಹೋತ್ಸವ ನಡೆಸಲಾಗುತ್ತಿದ್ದು. ಅ 14ರಂದು ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದಾ ಮೂರ್ತಿಯ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಂಪನ್ನಗೊಳ್ಳಲಿದೆ.