For the best experience, open
https://m.samyuktakarnataka.in
on your mobile browser.

ಮಕ್ಕಳ ಕಳ್ಳರ ಮೇಲೆ ಫೈರಿಂಗ್‌: ಪೊಲೀಸರಿಗೂ ಗಾಯ

04:06 PM Oct 25, 2024 IST | Samyukta Karnataka
ಮಕ್ಕಳ ಕಳ್ಳರ ಮೇಲೆ ಫೈರಿಂಗ್‌  ಪೊಲೀಸರಿಗೂ ಗಾಯ

ಬೆಳಗಾವಿ: ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಅಪಹರಣ​ ಮಾಡಿದ್ದ ಆರೋಪಿಗಳನ್ನು ಅಥಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸಾಂಬಾ ರಾವಸಾಬ್ ಕಾಂಬಳೆ, ಜಿಲ್ಲೆಯ ಚಿಕ್ಕೋಡಿ ಮೂಲದ ರವಿಕಿರಣ್​​ ಕಮಲಾಕರ್​​​ ಹಾಗೂ ಬಿಹಾರ ಮೂಲದ ಶಾರುಖ್​​​ ಶೇಕ್​​​ ಬಂಧಿತ ಆರೋಪಿಗಳು. ಬಂಧಿತರಿಂದ ಸ್ವಸ್ತಿ(4), ವಿಯೋಮ್(3)ನನ್ನು ರಕ್ಷಣೆ ಮಾಡಲಾಗಿದೆ.
ಬಂಧನದ ವೇಳೆ ಪೊಲೀಸರ ಮೇಲೆ ಕಲ್ಲು ತೂರಿ ಆರೋಪಿಗಳು ಪರಾರಿಗೆ ಯತ್ನಿಸಿದ್ದು, ಆತ್ಮ ರಕ್ಷಣೆಗೆ ಆರೋಪಿ ಸಾಂಬಾ ಮೇಲೆ ಪೊಲೀಸರಿಂದ ಫೈರಿಂಗ್​ ಮಾಡಲಾಗಿದೆ. ಈ ವೇಳೆ ಪಿಎಸ್ಐ ಮತ್ತು ಓರ್ವ ಪೊಲೀಸ್ ಕಾನ್ಸ್​ಟೇಬಲ್​​​​ ಕೈಗೆ ಗಾಯವಾಗಿದ್ದು, ಇಬ್ಬರನ್ನು ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Tags :