ಮಗನ ಜೊತೆಗೆ ತಾಯಿ ಕೂಡ SSLC ಪರೀಕ್ಷೆ ಬರೆಯಲು ಸಜ್ಜು
ಹಾವೇರಿ: ಮಗನ ಜೊತೆಗೆ ತಾಯಿ ಕೂಡ 10 ನೇ ತರಗತಿಯ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.
ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮಾಲತೇಶ ಸೋಮಪ್ಪ ಹೊನ್ನತ್ತಿ ಪ್ರಸಕ್ತ ಸಾಲಿನ ವಾರ್ಷಿಕ ಪರೀಕ್ಷೆ ಬರೆಯಲು ಸಜ್ಜಾಗಿದ್ದು. ಈತನೊಂದಿಗೆ ತಾಯಿ ಪುಷ್ಪಾವತಿ ಸಹ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.
7 ನೇ ತರಗತಿ ಪಾಸಾಗಿದ್ದ ಇವರು ಕಾರಣಾಂತರದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. 2007ರಲ್ಲಿ ವಿವಾಹವಾಗಿದ್ದು 2019ರಲ್ಲಿ ಅವರ ಪತಿ
ಅನಾರೋಗ್ಯದಿಂದ ಸಾವನ್ನಪ್ಪುತ್ತಾರೆ, ಗ್ರಾಮಸ್ಥರು ಹಾಗೂ ಪಂಚಾಯಿತಿಯವರು ಸಹಕಾರದಿಂದ ಗ್ರಾಮಪಂಚಾಯಿತಯಲ್ಲಿ ನೀರಗಂಟಿಯಾಗಿ ಸೇವೆ ಸಲ್ಲಿಸುವ ಕೆಲಸ ಪಡೆದುಕೊಳ್ಳುತ್ತಾರೆ, 2023 ರ ಅಗಷ್ಟ್ 15 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದೀಜಿಯವರಿದಿಂದ ವಿಶೇಷ ಆಹ್ವಾನಿತಳಾಗಿ ಸ್ವಾತಂತ್ರೊತ್ಸವ ಕಾರ್ಯಕ್ರಮದಲ್ಲಿ ಪುಷ್ಪಾವತಿ ಭಾಗಿಯಾದ ನಂತರ ಕಲಿಕೆಯ ಉತ್ಸಾಹ, ಉತ್ಸಾಹದ ಜೊತೆಗೆ ಜೀವನದಲ್ಲಿ ಸಾಧನೆಯ ಮೂಲಕ ಯಶಸ್ಸನ್ನು ಗಳಿಸಬೇಕು ಎಂಬ ತುಡಿತದಿಂದ ವಾರ್ಷಿಕ ಪರೀಕ್ಷೆಯನ್ನು ಬರೆಯಲು ಸಜ್ಜಾಗುತ್ತಾರೆ.