ಮಣ್ಣು ಕುಸಿದು-ಕಾರ್ಮಿಕನ ಸಾವು
ಶೃಂಗೇರಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಿನ್ನಲೆ ಜೆಸಿಬಿಯಿಂದ ಮಣ್ಣು ತೆಗೆಯುವ ವೇಳೆ ನಾಲ್ವರು ಕಾರ್ಮಿಕರ ಮೇಲೆ ಮಣ್ಣು ಕುಸಿದು, ಓರ್ವ ಸಾವನ್ನಪ್ಪಿರುವ ಘಟನೆ ನೆಮ್ಮಾರು ಸಮೀಪದ ತನಿಕೋಡು ಚೆಕ್ ಪೋಸ್ಟ್ ಬಳಿ ನಡೆದಿದೆ.
ನೆಮ್ಮಾರು ಸಮೀಪದ ತನಿಕೋಡು ಚೆಕ್ ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವೇಳೆ ಈ ಅವಘಡ ನಡೆದಿದೆ. ಜೆಸಿಬಿ ಯಂತ್ರ ಬಳಸಿದಾಗ ರಸ್ತೆಯ ತಡೆಗೋಡೆ ಸಮೀಪ ನಾಲ್ವರು ಕಾರ್ಮಿಕರು ಕೆಲಸ ಮಾಡುವಾಗ ಎಕಾಏಕಿ ಮಣ್ಣು ಕುಸಿದಿದೆ.
ತಕ್ಷಣವೇ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಿದ್ದು, ಸ್ವಲ್ವ ಸಮಯದ ವೇಳೆ ಮತ್ತೊಬ್ಬ ಕಾರ್ಮಿಕನ ರಕ್ಷಣೆ ಮಾಡಲಾಗಿದೆ. ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಸತತ ಒಂದು ಗಂಟೆ ಕಾಲ ಮೂರು ಜೆಸಿಬಿ ಮೂಲಕ ಕಾರ್ಯಾಚಾರಣೆ ಮಾಡಲಾಗಿತ್ತು.
ಆದರೆ ಒಂದೂವರೆ ಗಂಟೆಗಳ ಕಾಲ ಮಣ್ಣಿನಡಿಯಲ್ಲಿ ಸಿಲುಕಿದ ಕಾರಣ ಕಾರ್ಮಿಕ ಮುಜೀಬರ್ (೩೦) ಮೃತಪಟ್ಟಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಆಂಬುಲೆನ್ಸ್ ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿ ಕಾರ್ಮಿಕರ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.