ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮತದಾರರು use and throw ವಸ್ತುಗಳೇ…

09:38 AM Jul 13, 2024 IST | Samyukta Karnataka

ಬೆಂಗಳೂರು: ಹತ್ತಿದ ಏಣಿಯನ್ನೇ ಒದೆಯುವಷ್ಟು ಅಧಿಕಾರದ ಮದವೇರಿದೆಯೇ ಎಂದು ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ‌ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಹತ್ತಿದ ಏಣಿಯನ್ನೇ ಒದೆಯುವಷ್ಟು ಅಧಿಕಾರದ ಮದವೇರಿದೆಯೇ ಸಿಎಂ ಸಿದ್ದರಾಮಯ್ಯನವರೇ? ಅಧಿಕಾರದ ಮದವೇರಿದ ಕರ್ನಾಟಕ ಕಾಂಗ್ರೆಸ್‌ ಪಕ್ಷಕ್ಕೆ ಮತದಾರರು use and throw ವಸ್ತುಗಳೇ ಹೊರತು ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವುದಕ್ಕೆ ಚಾಮರಾಜನಗರದಲ್ಲಿ ನಡೆದಿರುವ ಘಟನೆಯೇ ಸಾಕ್ಷಿ. ಸಿಎಂ ಸಿದ್ದರಾಮಯ್ಯನವರೇ, ಜನರು ತಮ್ಮ ಸಮಸ್ಯೆಗಳನ್ನ, ಕುಂದುಕೊರತೆಗಳನ್ನ ಬರೆದು ಪತ್ರ, ಅಹವಾಲುಗಳನ್ನು ಕೊಟ್ಟರೆ ಅದನ್ನ ನಿಕೃಷ್ಟವಾಗಿ ಬೀದಿಪಾಲು ಮಾಡುತ್ತೀರಲ್ಲ, ಇದಕ್ಕೇನಾ ಜನ ನಿಮಗೆ ಅಧಿಕಾರ ಕೊಟ್ಟಿರೋದು? ತಮ್ಮ ಕುರ್ಚಿ ಜನಸೇವೆ ಮಾಡಲಿ ಎಂದು ಮತದಾರರು ನೀಡಿರುವ ಭಿಕ್ಷೆಯೇ ಹೊರತು ತಾವು ಯಾವ ಸೀಮೆ ಸುಲ್ತಾನರೂ ಅಲ್ಲ, ನವಾಬರೂ ಅಲ್ಲ. ನಿಮ್ಮ ಅಹಂಕಾರವೇ ನಿಮ್ಮನ್ನ ರಾಜಕೀಯ ಅಧಃಪತನಕ್ಕಿಳಿಸುವುದು ಶತಸಿದ್ಧ ಎಂದಿದ್ದಾರೆ.

Next Article