ಮತ್ತೋರ್ವ ಮಾಲಾಧಾರಿ ಸಾವು
09:20 AM Dec 27, 2024 IST | Samyukta Karnataka
ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಪ್ರಕರಣ: ಮಾಲಾಧಾರಿ ಸಾವಿನ ಸಂಖ್ಯೆ ಮೂರಕ್ಕೇರಿಕೆ
ಹುಬ್ಬಳ್ಳಿ: ಉಣಕಲ್ಲ ಗ್ರಾಮದಲ್ಲಿ ಸಿಲೆಂಡರ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಒಂಬತ್ತು ಮಾಲಾದಾರಿಗಳಲ್ಲಿ ಇಬ್ಬರು ಚಿಕಿತ್ಸೆ ಫಲಿಸದೆ ನಿನ್ನೆ ಸಾವನ್ನಪ್ಪಿದ್ದರು. ಇಂದು ಮತ್ತೊಬ್ಬ ಮಾಲಾಧಾರಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಮೂರಕ್ಕೇರಿದಂತಾಗಿದೆ.
ಕಳೆದ ನಾಲ್ಕು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆಯುತ್ತಿದ್ದ ಚಿಕಿತ್ಸೆಗೆ ಸ್ಪಂದಿಸದೆ ರಾಜು ಮೂಗೇರಿ (21) ಕೊನೆಯುಸಿರೆಳೆದಿದ್ದಾನೆ. ಕಳೆದ ದಿನ ನಿಜಲಿಂಗಪ್ಪ ಬೇಪುರಿ(58), ಸಂಜಯ ಸವದತ್ತಿ (18) ಮೃತರಾಗಿದ್ದರು.ಇನ್ನುಳಿದ ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ.