ಮತ ಎಣಿಕೆ ಕೇಂದ್ರದಿಂದ ಹೊರನಡೆದ ಬಿಜೆಪಿ ಅಭ್ಯರ್ಥಿ ರಾಜೂಗೌಡ
ಯಾದಗಿರಿ: ಸುರಪುರ ವಿಧಾನ ಸಭೆ ಉಪಚುನಾವಣೆ ಮತ ಎಣಿಕೆ ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರು 15 ನೇ ಸುತ್ತಿನ ನಂತರ ಹೊರ ನಡೆದರು.
ಈ ಸಂದರ್ಭದಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಅವರು ಜನಾಭಿಪ್ರಾಯಕ್ಕೆ ತಲೆಬಾಗುತ್ತೇನೆ.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ. 2023 ವಿಧಾನಸಭೆಯಲ್ಲಿ ಕೆಲ ತಪ್ಪುಗಳಿಂದ ಸೋಲನ್ನು ಅನುಭಿಸಿದ್ದೆ. ಈ ಉಪಚುನಾವಣೆ ಯಾರು ಬಯಸಿದ್ದಿಲ್ಲ. ಪಕ್ಷ ಟಿಕೆಟ್ ನೀಡಿದ್ದರಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದೆ.ಆದರೆ ಅನುಕಂಪ ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿಗಳು ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ತಮ್ಮ ಸೋಲನ್ನು ಅಧಿಕೃತವಾಗಿ ಒಪ್ಪಿಕೊಂಡರು.
ಒಂದನೇ ಸುತ್ತಿನಿಂದ ಮತ ಎಣಿಕೆಯಲ್ಲಿ ಹಾಜರಿದ್ದ ಬಿಜೆಪಿ ಅಭ್ಯರ್ಥಿ ರಾಜೂಗೌಡ ಅವರ 15 ನೇ ಸುತ್ತಿನ ಮತ ಎಣಿಕೆಯ ನಂತರ ತಮ್ಮ ಬೆಂಬಲಿಗರೊಂದಿಗೆ ಮತ ಎಣಿಕೆ ಕೇಂದ್ರದಿಂದ ಹೊರ ಹೋದರು.
ನಮ್ಮ ಪಕ್ಷದವರೆ ಕೆಲ ನಾಯಕರು ನಾಯಕರು ಕೈ ಬಿಟ್ಟಿದ್ದಾರೆ. ಬಯಸದೆ ಬಂದ ಉಪಚುನಾವಣೆಯಲ್ಲಿ ಹಿಂದೆ ಸರಿಯದೆ ಎದುರಾಳಿಯ ವಿರುದ್ದ ಕಣದಲ್ಲಿ ಹೋರಾಡಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ನನ್ನ ಕೈ ಬಿಡದೆ ನಿರಂತರ ಪ್ರಚಾರದಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ದೇವರ ರೂಪದಲ್ಲಿ ನಿಂತ ಕಾರ್ಯಕರ್ತರಿಗೆ ಸಲ್ಲಿಸುವೆ ಎಂದರು.