For the best experience, open
https://m.samyuktakarnataka.in
on your mobile browser.

ಮದುವೆ ಆಮಂತ್ರಣದಲ್ಲಿ ಮೋದಿ ಪರ ಪ್ರಚಾರ

07:22 PM Jan 28, 2024 IST | Samyukta Karnataka
ಮದುವೆ ಆಮಂತ್ರಣದಲ್ಲಿ ಮೋದಿ ಪರ ಪ್ರಚಾರ

ಬಾಗಲಕೋಟೆ: ನರೇಂದ್ರ ಮೋದಿಯವರ ಅಭಿಮಾನಿಗಳು ಮೋದಿ ಫೋಟೊ ಹಾಕಿ 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ನೀಡುವಂತೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವುದು ಹೆಚ್ಚಾಗಿ ಕಂಡು ಬರುತ್ತಿದೆ. ಅಂತೆಯೇ ಇಂತಹುದೇ ಒಂದು ಪ್ರಸಂಗ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ನಡೆದಿದೆ.
ಕನ್ಯಾ ಪಕ್ಷದ ಕುಟುಂಬದವರ ಆಮಂತ್ರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ನಡೆಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅವರಿಗೆ ಮತ ನೀಡಿದರೆ ಅದೇ ನನ್ನ ಮದುವೆಗೆ ನಿಜವಾದ ಉಡುಗೊರೆ ನೀಡಿದಂತೆ ಎನ್ನುವ ಸಂದೇಶ ಸಾರಿದ್ದಾರೆ. ಈ ಮೂಲಕ ಚುನಾವಣಾ ಪ್ರಚಾರ ಲಗ್ನ ಪತ್ರಿಕೆ ಮೂಲಕ ಪ್ರಚಾರ ಬಲು ಜೋರಾಗಿ ನಡೆಯುತ್ತಿವೆ.
ಬನಹಟ್ಟಿಯ ಪ್ರಭು ಕರಲಟ್ಟಿ ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ. ಹೀಗಾಗಿ ತನ್ನ ಮಗಳ ವಿವಾಹ ಆಮಂತ್ರಣದಲ್ಲಿ ಮೋದಿ ಭಾವಚಿತ್ರ ಮುದ್ರಿಸಿದ್ದಾರೆ. ಈ ಮೂಲಕ ಮೋದಿಯನ್ನು ಮತ್ತೊಮ್ಮೆ ಬೆಂಬಲಿಸಬೇಕೆಂದು ಸಂದೇಶ ಸಾರಿದ್ದಾರೆ.
ದಿ. 28ರಂದು ವಿವಾಹ ಜರುಗಿದ್ದು, ಗಂಡಿನ ಮನೆಯವರಿಂದಲೂ ಒಪ್ಪಿಸಿ ಮದುವೆ ನೆಪದಲ್ಲಿ ಮೋದಿ ಪರ ಪ್ರಚಾರಕ್ಕೆ ಮುಂದಾಗಿ, ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ-2024 ಎಂದು ಕಮಲ ಚಿಹ್ನೆಯ ಮೂಲಕ ಟ್ಯಾಗ್‌ಲೈನ್ ಜನರನ್ನು ಆಕರ್ಷಿಸುವಂತಿದೆ. ಮೋದಿ ಆಡಳಿತ ಹಾಗೂ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಬಗೆಗೆ ಇನ್ನಷ್ಟು ಅಭಿಮಾನ ಹೆಚ್ಚಲು ಕಾರಣವಾಗಿದೆಯಂತೆ. ಅಂದಾಜು 2 ಸಾವಿರಕ್ಕೂ ಅಧಿಕ ಲಗ್ನ ಪತ್ರಿಕೆಗಳನ್ನು ಮುದ್ರಣ ಮಾಡಿಸಿದ್ದಾರೆ.