For the best experience, open
https://m.samyuktakarnataka.in
on your mobile browser.

ಮಧುರೈ-ಬೆಂಗಳೂರು ವಂದೇ ಭಾರತ್‌ಗೆ ಚಾಲನೆ

10:07 PM Aug 31, 2024 IST | Samyukta Karnataka
ಮಧುರೈ ಬೆಂಗಳೂರು ವಂದೇ ಭಾರತ್‌ಗೆ ಚಾಲನೆ

ನವದೆಹಲಿ: ಮಧುರೈ-ಬೆಂಗಳೂರು ಸೇರಿದಂತೆ ವಂದೇ ಭಾರತ್‌ನ ಮೂರು ಹೊಸ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹಸಿರು ನಿಶಾನೆ ತೋರಿಸಿದ್ದಾರೆ. ಮೀರತ್-ಲಕ್ನೋ, ಚೆನ್ನೈ-ನಾಗರಕೋಯಿಲ್ ಇವು ಪ್ರಧಾನಿ ಚಾಲನೆ ನೀಡಿದ ಇನ್ನೆರಡು ವಂದೇಭಾರತ್ ರೈಲುಗಳಾಗಿವೆ.
ಬೆಂಗಳೂರು-ಮಧುರೈ ನಡುವಣ ವಂದೇಭಾರತ್ ರೈಲು ಸಂಚಾರದಿಂದ ಪ್ರಯಾಣ ಅವಧಿಯಲ್ಲಿ ಒಂದೂವರೆ ಗಂಟೆ ಕಡಿಮೆಯಾಗಲಿದೆ. ಇದೇ ರೀತಿ ಚೆನ್ನೈ- ನಾಗರಕೋಯಿಲ್ ನಡುವೆ ೨ ಗಂಟೆ ಪ್ರಯಾಣ ಇಳಿಮುಖಗೊಳ್ಳಲಿದೆ. ಲಕ್ನೋ-ಮೀರತ್ ನಡುವೆ ೧ ಗಂಟೆ ಪ್ರಯಾಣ ಕಡಿಮೆ ಯಾಗಲಿದೆ. ರೈಲ್ವೆ ಬಜೆಟ್ ಅನುದಾನ ಹೆಚ್ಚಿಸಿರುವುದರಿಂದ ಕರ್ನಾಟಕ ಮತ್ತು ತಮಿಳುನಾಡಿಗೆ ಹೆಚ್ಚಿನ ರೈಲ್ವೆ ಸವಲತ್ತು ಲಭಿಸಲಿದೆ ಎಂದು ಪ್ರಧಾನಿ ತಿಳಿಸಿದರು.
ಮಧುರೈ-ಬೆಂಗಳೂರು ಮಧ್ಯೆ ೬ ದಿನಗಳಲ್ಲಿ ವಂದೇ ಭಾರತ್: ಮಧುರೈ-ಬೆಂಗಳೂರು ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ಸಂಚರಿಸಲಿದೆ. ಮಧುರೈಯಿಂದ ಬೆಳಗ್ಗೆ ೫.೧೫ಕ್ಕೆ ಹೊರಡುವ ಈ ರೈಲು ಮಧ್ಯಾಹ್ನ ೧ ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ದಿಂಡುಗಲ್, ತಿರುಚರಪಳ್ಳಿ, ಕರೂರ್, ನಾಮಕ್ಕಲ್, ಸೇಲಂ ಹಾಗೂ ಕೃಷ್ಣರಾಜಪುರ ಮೊದಲಾದ ನಿಲ್ದಾಣದಲ್ಲಿ ಈ ರೈಲು ನಿಲ್ಲಲಿದೆ. ಇದೇ ರೈಲು ಬೆಂಗ ಳೂರಿನಿಂದ ಮಧ್ಯಾಹ್ನ ೧.೩೦ಕ್ಕೆ ಹೊರಟು ರಾತ್ರಿ ೯.೪೫ಕ್ಕೆ ಮಧುರೈ ತಲುಪಲಿದೆ.
ಈ ರೈಲು ಆರಂಭದಿಂದ ಬೆಂಗಳೂರು-ಮಧುರೈ ಮಧ್ಯೆ ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಸಂಚರಿಸುವುದಕ್ಕೆ ಅನುಕೂಲವಾಗಲಿದೆ.