ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಧ್ಯಮವರ್ಗದವರ ಮನಸ್ಥಿತಿ-ಪರಿಸ್ಥಿತಿಯ ಅನಾವರಣ

08:44 PM Nov 23, 2024 IST | Samyukta Karnataka

ಸಿನಿಮಾ: ಮರ್ಯಾದೆ ಪ್ರಶ್ನೆ
ನಿರ್ದೇಶನ: ನಾಗರಾಜ್ ಸೋಮಯಾಜಿ
ನಿರ್ಮಾಣ: ಸಕ್ಕತ್ ಸ್ಟುಡಿಯೋ
ತಾರಾಗಣ: ರಾಕೇಶ್, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ಶೈನ್ ಶೆಟ್ಟಿ, ಪ್ರಭು ಮುಂಡ್ಕೂರ್ ಹಾಗೂ ತೇಜು ಬೆಳವಾಡಿ.
ರೇಟಿಂಗ್ಸ್: ೩.೫
-ಗಣೇಶ್ ರಾಣೆಬೆನ್ನೂರು

ಮಧ್ಯಮವರ್ಗದ ಜನರಿಗೆ ಸಾಕಷ್ಟು ಆಸೆ, ಕನಸುಗಳಿರುತ್ತವೆ. ಅವುಗಳ ಪೈಕಿ ಪ್ರಮುಖವಾದದ್ದು ಹಣ. ಲಕ್ಷ್ಮೀ ಇದ್ದರೆ ಏನು ಬೇಕಾದರೂ ಸಾಧಿಸಬಹುದು, ಜೀವನದಲ್ಲಿ ಸುಖವಾಗಿರಬಹುದು, ಯಾವುದೇ ಮಟ್ಟಕ್ಕಾದರೂ ಬೆಳೆಯಬಹುದು ಎಂಬೆಲ್ಲ ಭ್ರಮೆಗಳಿರುತ್ತವೆ. ಕೆಲವೊಮ್ಮೆ ಏನೋ ಮಾಡಲು ಹೋಗಿ ಇನ್ನೇನೋ ಆಗುವುದೇ ರಿಯಾಲಿಟಿ..! ಭಾವನಾತ್ಮಕವಾಗಿ ಕ್ಷೀಣಿಸಿದರೆ ಲೈಫು ಬರ್ಬಾದ್ ಆಗುವುದರಲ್ಲಿ ಸಂಶಯವಿಲ್ಲ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ದ್ವೇಷ ಕಟ್ಟಿಕೊಟ್ಟರಂತೂ ಅರ್ಧ ರಸ್ತೆಯಲ್ಲೇ ಪಯಣಕ್ಕೆ ಟಾಟಾ ಹೇಳಬೇಕಾಬಹುದು…
ಇದು ಮರ್ಯಾದೆ ಪ್ರಶ್ನೆ’ಗೆ ರೂಪಕವಾದಉತ್ತರ’ ಎನ್ನಬಹುದು. ಮೂವರು ಮಿಡ್ಲ್ ಕ್ಲಾಸ್ ಯುವಕರು, ಅವರ ಜೀವನದ ಕನಸು, ಕಷ್ಟ-ಕಾರ್ಪಣ್ಯಗಳನ್ನೆಲ್ಲ ತೋರಿಸುತ್ತಾ, ಅವರೊಳಗೊಂದು ಬೆಂಕಿಯಿದೆ. ಅದರ ತೀವ್ರತೆ ಯಾವ ರೀತಿಯದ್ದು ಎಂಬುದನ್ನೂ ಹರವಿಡುತ್ತಾ ಮಧ್ಯಮವರ್ಗದವರ ಮನಸ್ಥಿತಿ, ಪರಿಸ್ಥಿತಿಯನ್ನು ಅನಾವರಣ ಮಾಡುತ್ತಾ ಹೋಗಿದ್ದಾರೆ ನಿರ್ದೇಶಕ ನಾಗರಾಜ್ ಸೋಮಯಾಜಿ.
ಸಿನಿಮಾದಲ್ಲಿ ಬೋಧನೆಯಿಲ್ಲ. ಬದುಕಿನ ವಾಸ್ತವತೆಯ ಮೇಲೆ ಬೆಳಕು ಚೆಲ್ಲಲಾಗಿದೆ. ಏನೇನೋ ಕನಸು ಕಟ್ಟಿಕೊಂಡವರು ಅದೇ ಹಾದಿಯಲ್ಲಿ ಸಾಗಬೇಕೇ ಹೊರತು ಇನ್ನೇನೋ ಮಾಡಿ ದುಡುಕಬಾರದು ಎಂಬ ನೀತಿಕತೆಯಿದೆ. ಇಡೀ ಸಿನಿಮಾ ನೋಡಿದ ಮೇಲೆ ಮಧ್ಯಮವರ್ಗದವರ ಬವಣೆಯ ಕನ್ನಡಿಯಂತೆ ಭಾಸವಾಗುತ್ತದೆ. ಅಷ್ಟರಮಟ್ಟಿಗೆ ಸಮಾಜದ ಅಂಕು-ಡೊಂಕುಗಳನ್ನು ಒಂದೇ ಫ್ರೇಮಿನಲ್ಲಿ ಬಂಧಿಸಿಡುವ ಪ್ರಯತ್ನ ಮಾಡಲಾಗಿದೆ.
ಚಿತ್ರದಲ್ಲಿ ಬರುವ ಸೂರಿ, ಮಂಜ… ಸೇರಿದಂತೆ ಪ್ರತಿಯೊಂದು ಪಾತ್ರವೂ ಕಥೆಗೆ ಪೂರಕವಾಗಿದೆ. ಕಲಾವಿದರೂ ಅಷ್ಟೇ ಧ್ಯಾನಿಸಿ, ಜೀವಿಸಿದ್ದಾರೆ. ಹೀಗಾಗಿ ಇಲ್ಲಿ ನಾಯಕ-ಖಳನಾಯಕ, ಪೋಷಕ ಪಾತ್ರ ಅಂತೆಲ್ಲ ವಿಂಗಡಿಸದೇ ಒಟ್ಟಾರೆ ಸಿನಿಮಾ ಕಾಡುತ್ತಾ, ನೋಡುತ್ತಾ ಮನಸ್ಸಿನ ಮೂಲೆಯಲ್ಲಿ ನೋಡುಗರಿಗೇ ಪ್ರಶ್ನೆ ಮೂಡಿಸುತ್ತದೆ. ರಾಕೇಶ್, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ಶೈನ್ ಶೆಟ್ಟಿ, ಪ್ರಭು ಮುಂಡ್ಕೂರ್ ಹಾಗೂ ತೇಜು ಬೆಳವಾಡಿ ಮುಂತಾದವರು ನೈಜವಾಗಿ ಕಾಣಿಸಿಕೊಂಡಿರುವುದೇ ಸಿನಿಮಾದ ಪ್ಲಸ್ ಪಾಯಿಂಟ್. ತಾಂತ್ರಿಕವಾಗಿಯೂ ಸಾಕಷ್ಟು ಅಂಶಗಳು ಗಮನ ಸೆಳೆಯುತ್ತವೆ.

Next Article