ಮನೀಶ್ ಪಾಂಡೆ ದಂಪತಿ ವಿಚ್ಛೇದನ?
ಬೆಂಗಳೂರು: ೨೦೨೫ನೇ ಆರಂಭದಲ್ಲಿ ಕ್ರಿಕೆಟರ್ ಯೆಜುವೇಂದ್ರ ಚಹಲ್ ಹಾಗೂ ಧನಶ್ರೀ ನಡುವಿನ ಸಂಬಂಧ ಬಿರುಕು ಬಿಟ್ಟಿದ್ದು, ವಿಚ್ಛೇದನೆಗೆ ಮುಂದಾಗಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಈಗ ಕನ್ನಡಿಗ ಮನೀಶ್ ಪಾಂಡೆ ದಂಪತಿಯೂ ಅದೇ ಹಾದಿಯಲ್ಲಿ ಸಾಗಿದ್ದಾರೆ ಎಂಬ ಸುದ್ದಿ ಹರಡಿದೆ. ಇನ್‌ಸ್ಟಾಗ್ರಾಂನಲ್ಲಿ ಮನೀಶ್ ಪಾಂಡೆ ಹಾಗೂ ಪತ್ನಿ ಆಶ್ರಿತಾ ಶೆಟ್ಟಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳಾಗಿವೆ.
ಸದ್ಯ ಮನೀಶ್ ಪಾಂಡೆ ಇನ್‌ಸ್ಟಾಗ್ರಾಂನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಅತ್ತ ಪತ್ನಿ ಕೂಡ ೧೬೫ ಮಂದಿಯನ್ನು ಫಾಲೋ ಮಾಡುತ್ತಿದ್ದು, ಮನೀಶ್ ಪಾಂಡೆ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಮನೀಶ್ ಪಾಂಡೆ ಅವರ ಅಕೌಂಟ್‌ನಲ್ಲಿ ಪತ್ನಿ ಜೊತೆಗಿನ ಒಂದೇ ಒಂದು ಫೋಟೋ ಕೂಡ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ, ಈ ದಂಪತಿಯೂ ಈಗ ದೂರ ಸರಿಯುವ ಮುನ್ಸೂಚನೆಗಳು ಸಿಕ್ಕಿವೆ. ಹಾರ್ದಿಕ್ ಪಾಂಡ್ಯ-ನತಾಶ ಸ್ಟಾಂಕೋವಿಕ್ ವಿಚ್ಛೇದನ ಪಡೆದು ಈಗಾಗಲೇ ದೂರ ಸರಿದಿದ್ದು, ಈಗ ಇದೇ ಸಾಲಿಗೆ ಚಹಲ್ ಹಾಗೂ ಮನೀಶ್ ಕೂಡ ಸೇರಿಕೊಳ್ಳುವ ಸಾಧ್ಯತೆಗಳಿವೆ.
ಇಷ್ಟೇ ಅಲ್ಲದೇ, ೨೦೨೧ರ ನಂತರ ಮನೀಶ್ ಪಾಂಡೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಕೆಕೆಆರ್ ತಂಡದಲ್ಲೂ ಅದೃಷ್ಟವಾತ್ ಮುಂದಿನ ಐಪಿಎಲ್‌ಗೆ ಅವಕಾಶ ಸಿಕ್ಕಿದೆ. ಆದರೆ, ಕರ್ನಾಟಕ ತಂಡದಿಂದಲೂ ಮನೀಶ್‌ಗೆ ಸ್ಥಾನವನ್ನು ನಿರಾಕರಿಸಲಾಗಿದೆ. ಈಗ ಈ ವೈವಾಹಿಕ ಜೀವನವೂ ಸಂಕಷ್ಟಕ್ಕೆ ಸಿಲುಕಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ೨೦೧೯ರಲ್ಲಿ ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ ವಿವಾಹವಾಗಿದ್ದರು.