ಮನೆ ಗೋಡೆ ಕುಸಿದು ಆಟೋ ಜಖಂ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಹಾಗೂ ಗಾಳಿ ಅಬ್ಬರ ಮುಂದೂವರೆದಿದ್ದು, ಭಾರೀ ಗಾಳಿಗೆ ಮನೆ ಗೋಡೆ ಕುಸಿದಿದೆ. ಅಜ್ಜಂಪುರ ತಾಲೂಕಿನಲ್ಲಿ ಘಟನೆ ನಡೆದಿದ್ದು, ಗೋಡೆ ಮನೆಯ ಹೊರಭಾಗಕ್ಕೆ ಬಿದ್ದಿದೆ. ಒಳ ಭಾಗಕ್ಕೆ ಬಿದ್ದಿದ್ದತರೇ ದೊಡ್ಡ ಅನಾಹುತವೇ ಸಂಭವಿ ಸುತ್ತಿತ್ತು.
ಗೋಡೆ ಕುಸಿತದಿಂದ ಮನೆ ಯಲ್ಲಿದ್ದವರು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ನಾಗೇಶ್ ಶೆಟ್ಟಿ ಎಂಬುವರಿಗೆ ಸೇರಿದ ಮನೆಯಾಗಿದ್ದು, ಮನೆಯ ಮುಂಭಾಗದ ಗೋಡೆ ಕುಸಿದಿದ್ದು ಮನೆ ಮುಂದೇ ನಿಲ್ಲಿಸಿದ್ದ ಆಟೋ ಜಖಂ ಗೊಂಡಿದೆ. ಸ್ಥಳಕ್ಕೆ ಪಂಚಾ ಯತ್ ಅಧಿಕಾರಿಗಳು ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಭದ್ರಾ ನದಿಯಲ್ಲಿ ಸಿಲುಕಿದ್ದ ದನಗಳ ರಕ್ಷಣೆ ಮಾಡಲಾಗಿದೆ. ನರಸಿಂಹರಾಜ ಪುರ ತಾಲೂಕಿನ ಹೊನ್ನೆಕೊಡಿಗೆ ಸಾಲೂರು ಬಳಿ ನದಿ ಮದ್ಯದ ದ್ವೀಪದಂತಹ ಸ್ಥಳದಲ್ಲಿ ದನಗಳು ಸಿಲುಕಿಕೊಂಡಿದ್ದು ಭದ್ರಾ ಹುಲಿ ಸಂರಕ್ಷಿತಾರಣ್ಯದ ಸಿಬ್ಬಂದಿ ಹಾಗೂ ಸ್ಥಳೀಯರು
ಬೋಟ್ ಬಳಸಿ ದನಗಳನ್ನು ರಕ್ಷಣೆ ಮಾಡಿದ್ದಾರೆ. ಸಾಲೂರು ಸಮೀಪ ದ್ವೀಪದಂತಹ ಸ್ಥಳಕ್ಕೆ ದನಗಳು ಮೇಯಲು ತೆರಳಿದ್ದು, ಬೋಟ್ ಮೂಲಕ ತೆರಳಿಸ ಸಿಬ್ಬಂದಿಗಳು ಹಾಗೂ ಸ್ಥಳೀಯರು ದನಗ ಳನ್ನು ಹೆದರಿಸಿ ದಡ ಸೇರಿಸಿದ್ದಾರೆ.