ಮಲಪ್ರಭಾ ನದಿಯ ಕಿತ್ತಲಿ ಬ್ಯಾರೆಜ್ ಸಂಪೂರ್ಣ ಜಲಾವೃತ
06:54 PM Aug 02, 2024 IST | Samyukta Karnataka
ಕುಳಗೇರಿ ಕ್ರಾಸ್: (ಬಾಗಲಕೋಟೆ) ಬಾದಾಮಿ ನರಗುಂದ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಮಲಪ್ರಭಾ ನದಿಯ ಕಿತ್ತಲಿ ಬ್ಯಾರೆಜ್ ಸಂಪೂರ್ಣ ಜಲಾವೃತಗೊಂಡಿದೆ. ಜನರು
ಸುಮಾರು 20 ಕೀಮೀ ಸುತ್ತುವರೆದು ಸಂಚರಿಸುವ ಪರಿಸ್ಥಿತಿ ನಿರ್ಮಾನವಾಗಿದೆ. ಮಲಪ್ರಭಾ ಜಲಾನಯಣ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಜಲಾಶಯದ ಒಳಹರಿವು ಅಧಿಕವಾಗಿದೆ. ನವಿಲುತೀರ್ಥ ಜಲಾಶಯದಲ್ಲಿ 2076 ಅಡಿ ನೀರು ಸಂಗ್ರಹವಾಗಿದ್ದು ಸಂಪೂರ್ಣ ಭರ್ತಿಯಾಗುವ ಹಂತ ತಲುಪಿದೆ. ಸದ್ಯ ಜಲಾಶಯದಲ್ಲಿ ಮುಂಜಾಗೃತ ಕ್ರಮವಾಗಿ 3 ಅಡಿ ಮಾತ್ರ ಭಾಕಿ ಉಳಿಸಲಾಗಿದ್ದು ಒಳ ಹರಿವಿನ ಸಂಪೂರ್ಣ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಜಲಾಶಯದ ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಕಂದಾಯ ನಿರೀಕ್ಷಕ ವಿ ಎ ವಿಶ್ವಕರ್ಮ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದು ಜನರು ನದಿಯ ಪಾತ್ರಕ್ಕೆ ಹೋಗದಂತೆ ಮುಂಜಾಗೃತ ಕ್ರಮವಾಗಿ ರಸ್ತೆಗಳನ್ನ ಮುಳ್ಳು ಕಂಠಿಗಳಿಂದ ಸಂಚಾರ ಸ್ಥಗಿತಗೊಳಿಸಿದ್ದಾರೆ. ಗ್ರಾಮಸ್ಥರು ಶಾಲಾ ಮಕ್ಕಳು ಸುತ್ತುವರೆದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ