For the best experience, open
https://m.samyuktakarnataka.in
on your mobile browser.

ಮಲೆನಾಡಿನಿಂದ ದೇಶದಾದ್ಯಂತ ಹೊಸ ಅಧ್ಯಾಯ ಆರಂಭ

12:22 PM Jul 14, 2024 IST | Samyukta Karnataka
ಮಲೆನಾಡಿನಿಂದ ದೇಶದಾದ್ಯಂತ ಹೊಸ ಅಧ್ಯಾಯ ಆರಂಭ

ಬೆಂಗಳೂರು: ಅಭಿವೃದ್ಧಿಯ ಶಪಥ - ಮಲೆನಾಡಿನಿಂದ ದೇಶದಾದ್ಯಂತ: ಸಮಗ್ರ ರೈಲು ಸಂಪರ್ಕ ಕ್ರಾಂತಿಯ ಹೊಸ ಅಧ್ಯಾಯ ಆರಂಭ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಶಿವಮೊಗ್ಗ ನಡುವಿನ ನೂತನ ರೈಲಿಗೆ ಚಾಲನೆ ನೀಡಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು

▶️ ಶಿವಮೊಗ್ಗ-ಬೀರೂರು ನಡುವೆ ಹಳಿ ಡಬ್ಲಿಂಗ್ ಅಗತ್ಯವಿದ್ದು ಕೇಂದ್ರಕ್ಕೆ 1,200 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇನ್ನೆರಡು ತಿಂಗಳಲ್ಲಿ ಟೆಂಡ‌ರ್ ಕರೆದು ಡಬ್ಲಿಂಗ್ ಕೆಲಸ ಶುರುವಾಗುವ ವಿಶ್ವಾಸವಿದೆ.

▶️ ಶಿವಮೊಗ್ಗವನ್ನು ಕೊಂಕಣ ರೈಲ್ವೇಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆ. ಬೀರೂರು, ಹಾಸನ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಚಿಕ್ಕಮಗಳೂರಿನಿಂದ ಹಾಸನ 60 ಕಿ.ಮೀ. ಇರುವುದರಿಂದ ಈ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವುದರಿಂದ ಶಿವಮೊಗ್ಗದಿಂದಲೇ ಮಂಗಳೂರಿಗೆ ತೆರಳಬಹುದು.

▶️ ಶಿವಮೊಗ್ಗ ಕೋಟೆಗಂಗೂರಿನಲ್ಲಿ 5ನೇ ಡಿಪೋ ಕಾಮಗಾರಿ ಶುರುವಾಗಿದೆ. ಇನ್ನೊಂದು ವರ್ಷದಲ್ಲಿ ಕಾಮಗಾರಿ ಮುಗಿಯಲಿದೆ. ಅಲ್ಲಿ ಎಲ್ಲಾ ರೈಲುಗಳ ನಿರ್ವಹಣೆ ನಡೆಯಲಿದೆ. ಇದರಿಂದ ರೈಲು ಸಂಚಾರ ಹೆಚ್ಚು ಆಗಲಿದೆ.

▶️ 2,500 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ -ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗ ಪೂರ್ಣ ಗೊಂಡರೆ ಮುಂಬೈಗೆ ಲಿಂಕ್ ಆಗಲಿದೆ ಎಂದಿದ್ದಾರೆ.