For the best experience, open
https://m.samyuktakarnataka.in
on your mobile browser.

ಮಸೀದಿ ಎದುರು ವಾದ್ಯ ಬಾರಿಸಬಾರದೇ…?

11:53 AM Sep 12, 2024 IST | Samyukta Karnataka
ಮಸೀದಿ ಎದುರು ವಾದ್ಯ ಬಾರಿಸಬಾರದೇ…

ಧಾರವಾಡ: ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಘಟನೆ ಅತ್ಯಂತ ಅಪರಾಧವಾದದ್ದು ಎಂದು ಶ್ರೀರಾಮ‌ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ದೂರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾತ್ರಿ ಮಸೀದಿ ಎದುರು ಗಣೇಶ ಬಂದಾಗ ಕಲ್ಲು ತೂರಾಟ ಹಾಗೂ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದರಿಂದ ಗಣಪತಿಗೆ ಧಕ್ಕೆಯಾಗಿದೆ. ಮುಸ್ಲಿಂ ಸಮಾಜ ಇದನ್ನು ವಿಚಾರ ಮಾಡಬೇಕು. ಮುಸ್ಲಿಂರು ಅಲ್ಲಾಹುನ್ನು ಪೂಜೆ ಮಾಡುತ್ತಾರೆ. ನಾವು ಯಾವತ್ತೂ ಗಲಾಟೆ ಮಾಡಿಲ್ಲ ಎಂದಿದ್ದಾರೆ.
ಮಸೀದಿ ಬಂದಾಗ ವಾದ್ಯ ಬಾರಿಸಬಾರದು ಎಂಬ ನಿಯಮ ಏನಾದರೂ ಇದೆಯಾ? ದೇವಾಲಯ, ಅಂಗಡಿ ಎಲ್ಲ ಕಡೆ ಮೆರವಣಿಗೆ ಇರುತ್ತದೆ. ಕಳೆದ ವರ್ಷ ಇದೇ ಮಸೀದಿ ಎದುರು ಗಲಾಟೆಯಾಗಿದೆ. ಚೆಲುವರಾಯಸ್ವಾಮಿ ಗಲಾಟೆ ಬಗ್ಗೆ ವಿಚಾರ ಮಾಡಬೇಕಿತ್ತು ಎಂದು ನೇರವಾಗಿ ಆರೋಪಿಸಿದ್ದಾರೆ. ಮಸೀದಿಯಲ್ಲಿ ಪೆಟ್ರೋಲ್ ಬಾಂಬ್ ಹೇಗೆ ಬಂತು. ಇದಕ್ಕೆ ಕಾರಣ ಸಚಿವ ಚೆಲುವರಾಯಸ್ವಾಮಿ. ಈ ಬಗ್ಗೆ ಮೊದಲೇ ಸಭೆ ನಡೆಸಬೇಕಿತ್ತು. ಈ ಘಟನೆಗೆ ಕಾರಣ ಯಾರು? ಕಿಡಿಗೇಡಿ ಮುಸ್ಲಿಂರು ಅಲ್ಲಿದ್ದಾರೆ. ಅವರು ಇಡೀ ಸಮಾಜಕ್ಕೆ ಕಳಂಕ ಎಂದಿದ್ದಾರೆ. ರಾಜ್ಯದಲ್ಲಿರುವುದು ಹಿಂದೂ ವಿರೋಧಿ ಸರ್ಕಾರ. ಚೆಲುವರಾಯಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕು. ಈ ಘಟನೆಗೆ ಅವರೇ ಕಾರಣ ಎಂದು ಒತ್ತಾಯಿಸಿದ್ದಾರೆ.

Tags :