ಮಹದಾಯಿ ಯೋಜನೆ ಕೇಂದ್ರ ಸರ್ಕಾರ ಸ್ಪಂದಿಸಲಿ
ಧಾರವಾಡ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದು, ಕೇಂದ್ರ ಇದಕ್ಕೆ ಶೀಘ್ರ ಸ್ಪಂದಿಸಬೇಕು ಎಂದು ಶಾಸಕ ವಿನಯ ಕುಲಕರ್ಣಿ ಆಗ್ರಹಿಸಿದ್ದಾರೆ.
ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟೈಗರ್ ಕಾರಿಡಾರ್ ಎಂದು ಮಾಡಲಾಗಿದೆ. ಅಲ್ಲಿ ನಮ್ಮ ಕೆಲಸ ಅಂಡರ್ ಗ್ರೌಂಡ್ ನಡೆಯುತ್ತದೆ. ಆದರೆ, ಕೇಂದ್ರ ಸರ್ಕಾರ ವನ್ಯಜೀವಿ ಸಂರಕ್ಷಣೆ ವಿಚಾರ ಇಟ್ಟುಕೊಂಡು ಕ್ಲಿಯರನ್ಸ್ ಕೊಡುತ್ತಿಲ್ಲ. ಕ್ಲಿಯರನ್ಸ್ ಸಿಕ್ಕರೆ ಕೂಡಲೇ ಕಾಮಗಾರಿ ಆರಂಭಗೊಳ್ಳುತ್ತದೆ ಎಂದರು.
ಮುನಿರತ್ನ ಅವರು ಮಾತನಾಡಿದ್ದು ತಪ್ಪು. ದೊಡ್ಡ ಸಮುದಾಯದ ಬಗ್ಗೆ ಆ ರೀತಿ ಮಾತನಾಡಬಾರದಿತ್ತು. ಅವರು ಮಾಡಿದ ತಪ್ಪಿಗಾಗಿ ಬಂಧನವಾಗಿದೆ ಎಂದರು.
ರಾಜಕೀಯ ಕ್ಷೇತ್ರಕ್ಕೆ ಕೆಲವರು ತಮ್ಮ ಲಾಭಕ್ಕಾಗಿ ಬರುತ್ತಿದ್ದಾರೆ ಎಂಬ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕೇವಲ ರಾಜಕಾರಣಿಗಳು ಎನ್ನಬೇಡಿ. ರಾಜಕಾರಣದಲ್ಲಿ ಅವರು ಹೇಳಿದಂತೆ ಎಲ್ಲ ರೀತಿಯ ಜನ ಇದ್ದಾರೆ. ಎಲ್ಲ ಪಕ್ಷದಲ್ಲೂ ಸ್ವಹಿತಾಸಕ್ತಿಗಾಗಿ ಬರುವವರಿದ್ದಾರೆ. ಅಂತಹ ರಾಜಕಾರಣಿಗಳು ಬದಲಾಗಬೇಕು. ಅಂತವರನ್ನು ಇಟ್ಟುಕೊಂಡರೆ ಪಕ್ಷಗಳು ಹಾಳಾಗುತ್ತವೆ. ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.