ಮಹಾಕುಂಭದಲ್ಲಿ ಸಚಿವ ಸಂಪುಟ ಸಭೆ: ಸಂಪುಟ ಸಹೋದ್ಯೋಗಿಗಳ ಜೊತೆ ಯೋಗಿ ತೀರ್ಥಸ್ನಾನ
03:31 PM Jan 22, 2025 IST | Samyukta Karnataka
ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ಇಡೀ ಸಚಿವ ಸಂಪುಟದೊಂದಿಗೆ ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ಸಂಗಮ ಸ್ನಾನ ಮಾಡಿದ್ದಾರೆ.
ಸಚಿವ ಸಂಪುಟದೊಂದಿಗೆ ಸಭೆ: ಪ್ರಯಾಗ್ರಾಜ್‌ನ ಇಂಟಿಗ್ರೇಟೆಡ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಸಿಎಂ ಯೋಗಿ ಸರ್ಕಾರದ ಕ್ಯಾಬಿನೆಟ್ ಸಭೆ ನಡೆಸಿದ್ದಾರೆ. ಯೋಗಿ ಸರ್ಕಾರದ ಎಲ್ಲಾ 54 ಸಚಿವರು ಪಾಲ್ಗೊಂಡಿದ್ದರು. ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯನಾಥ್, ಪ್ರಯಾಗ್‌ರಾಜ್‌ನಲ್ಲಿ ಗಂಗಾ ನದಿಗೆ ಎರಡು ಹೊಸ ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು. ಯಮುನಾ ನದಿಗೆ ಸೇತುವೆಯನ್ನೂ ನಿರ್ಮಿಸಲಾಗುವುದು. ಎಂದಿದ್ದಾರೆ.
ಮಹಾಕುಂಭಮೇಳಕ್ಕೆ ಗಣ್ಯರ ಭೇಟಿ : ಪ್ರಯಾಗ್‌ರಾಜ್‌ನ ಧಾರ್ಮಿಕ ಹಬ್ಬದಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಸಚಿವ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವ ಸಾಧ್ಯತೆಯಿದೆ.