ಮಹಾಬಲೇಶ್ವರ ದೇವಾಲಯಕ್ಕೆ ನೋಟಿಸ್: ಮೇಲ್ಮನವಿಗೆ ಜಯ
12:06 AM Apr 12, 2024 IST
|
Samyukta Karnataka
ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ೨೦೧೫-೧೬ನೇ ಸಾಲಿಗೆ ರೂ. ೧.೪೨ ಕೋಟಿ ತೆರಿಗೆ ಬಾಕಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಗೆ ಜಯ ಲಭಿಸಿದೆ.
ಐಟಿ ಇಲಾಖೆ ಕೆಲವು ತಿಂಗಳ ಹಿಂದೆ ನೀಡಿದ್ದ ಈ ಆದೇಶದ ವಿರುದ್ಧ ಮೇಲ್ಮನವಿ ಮಾಡಲಾಗಿತ್ತು. ಇದೀಗ ಮೇಲ್ಮನವಿಯ ಆದೇಶ ಬಂದಿದ್ದು, ದೇಗುಲದ ತೆರಿಗೆ ಬಾಕಿ ಶೂನ್ಯ ಎಂದು ಆದಾಯ ತೆರಿಗೆ ಇಲಾಖೆಯು ತನ್ನ ಆದೇಶದಲ್ಲಿ ದೃಢೀಕರಿಸಿದೆ. ೨೦೧೫-೧೬ ನೇ ಸಾಲಿನಲ್ಲಿ ಶ್ರೀರಾಮಚಂದ್ರಾಪುರಮಠದ ಆಡಳಿತದಲ್ಲಿದ್ದ ಮಹಾಬಲೇಶ್ವರ ದೇವಾಲಯದ ಬ್ಯಾಂಕ್ ಖಾತೆಯಲ್ಲಿ ನಗದು ಜಮಾವಣೆಯ ಕುರಿತಾಗಿ ಸ್ಪಷ್ಟೀಕರಣವನ್ನು ಕೋರಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿತ್ತು. ಅಲ್ಲದೇ ಈ ಕುರಿತಾಗಿ ರೂ. ೧.೪೨ ಕೋಟಿಯನ್ನು ತೆರಿಗೆ ಬಾಕಿಯಾಗಿ ಪರಿಗಣಿಸಿ ಜಮಾ ಮಾಡುವಂತೆ ಆದೇಶಿಸಿತ್ತು.
Next Article