ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಹಾರಾಜ ಟ್ರೋಫಿ ೨೦೨೪: ಯುವ ಆಟಗಾರರತ್ತ ವಾರಿಯರ್ಸ್ ಚಿತ್ತ

07:09 PM Jul 12, 2024 IST | Samyukta Karnataka

ಬೆಂಗಳೂರು: ೩ನೇ ಆವೃತ್ತಿಯ ಮಹಾರಾಜ ಟ್ರೋಫಿಗೆ ಹಾಲಿ ರನ್ನರ್‌ಅಪ್ ತಂಡ ಮೈಸೂರು ವಾರಿಯರ್ಸ್ ತಂಡ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಆಗಸ್ಟ್ ೧೫ರಿಂದ ಆರಂಭಗೊಳ್ಳಲಿರುವ ಮಹಾರಾಜ ಟ್ರೋಫಿ ಟೂರ್ನಿಗೆ ತಂಡ ಜುಲೈ ೨೫ರಂದು ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಿದ್ದು, ಆ ಸಲುವಾಗಿ ಕನ್ನಡಿಗ ಆಟಗಾರರ ಟ್ಯಾಲೆಂಟ್ ಹಂಟ್ ಮಾಡಿದೆ. ನಗರದ ಹೊರವಲಯದಲ್ಲಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಈ ಆಟಗಾರರ ಪರೀಕ್ಷೆಯಲ್ಲಿ ೨೦೦ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಕೌಶಲ್ಯ ಪ್ರದರ್ಶಿಸಿದರು.
ಮೈಸೂರು ವಾರಿಯರ್ಸ್ನ ಮಾಲೀಕರಾದ ಅರ್ಜುನ್ ರಂಗ, ಆಟಗಾರ ಕರುಣ್ ನಾಯರ್, ತಂಡದ ವ್ಯವಸ್ಥಾಪಕರಾದ ಸುರೇಶ್.ಎಂ.ಆರ್ ಮತ್ತು ಸಹಾಯಕ ಕೋಚ್ ವಿಜಯ್ ಮದ್ಯಾಳ್ಕರ್ ಉಪಸ್ಥಿತಿಯಲ್ಲಿ ನಡೆದ ಪ್ರತಿಭಾನೇಷ್ವಣೆಯಲ್ಲಿ, ಬೆಂಗಳೂರು ನಗರದ ಹಲವು ಅಕಾಡೆಮಿಗಳಲ್ಲಿ ತರಬೇತಿ ನಡೆದ ಆಟಗಾರರು ಬೌಲಿಂಗ್-ಬ್ಯಾಟಿAಗ್‌ನಲ್ಲಿ ಗಮನ ಸೆಳೆದರು. ಈ ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ ಆಟಗಾರರು ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದು, ಆಸಕ್ತ ತಂಡಗಳು ಖರೀದಿಸಿಬಹುದು. ಅಲ್ಲದೇ ಮೈಸೂರು ತಂಡವೂ ಈ ಉತ್ತಮ ಆಟಗಾರರನ್ನು ಖರೀದಿಸಲು ಈ ಪ್ರತಿಭಾನೇಷ್ವಣೆ ಮಾಡಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ಪ್ರತಿಭಾನ್ವೇಷಣೆ ನಡೆದಿದ್ದು, ೨ನೇ ಹಂತದ ಟ್ಯಾಲೆಂಟ್ ಹಂಟ್ ಜುಲೈ ೧೮ರಂದು ಮೈಸೂರಿನಲ್ಲಿ ನಡೆಯಲಿದೆ. ಈ ವೇಳೆ ಮೈಸೂರು ವಾರಿಯರ್ಸ್ನ ಮಾಲೀಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ, “ಹಲವು ಯುವ ಪ್ರತಿಭೆಗಳನ್ನು ಗಮನಿಸಿದ್ದೇವೆ. ಹರಾಜು ಪ್ರಕ್ರಿಯೆಯ ಬಳಿಕ ಕೆಲವು ಪ್ರತಿಭೆಗಳು ನಮ್ಮ ತಂಡವನ್ನು ಸೇರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Next Article