ಮಹಾಲಕ್ಷ್ಮೀ ಹತ್ಯೆ ಆರೋಪಿ ಸುಳಿವು
ಬೆಂಗಳೂರು: ಬೆಂಗಳೂರಿನ ವಯ್ಯಾಲಿ ಕಾವಲ್‌ನಲ್ಲಿ ನೇಪಾಳ ಮಹಿಳೆ ಮಹಾ ಲಕ್ಷ್ಮೀಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಳಿವು ಪತ್ತೆಯಾಗಿದೆ.
ಆಕೆಯ ದೇಹವನ್ನು ೫೦ ತುಂಡುಗಳ ನ್ನಾಗಿಸಿ ಫ್ರಿಡ್ಜ್ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದ. ಈ ಘಟನೆಯಿಂದ ಬೆಂಗಳೂರು ತಲ್ಲಣಗೊಂಡಿತ್ತು.ಆರೋಪಿಗಳ ಪತ್ತೆಗಾಗಿ ಪೊಲೀಸರು ಆರು ತಂಡಗಳನ್ನು ರಚಿಸಿಕೊಂಡಿದ್ದ ಪೊಲೀಸರು ಹತ್ಯೆ ನಡೆದ ವಯ್ಯಾಲಿ ಕಾವಲ್‌ನ ಮುನೇಶ್ವರನಗರದ ಮಹಾಲಕ್ಷ್ಮೀ ನಿವಾಸದ ಸುಮಾರು ನೂರು ಮೀಟರ್ ಅಂತರದಲ್ಲಿನ ಎಲ್ಲ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ದ್ದರು. ಮಹಾಲಕ್ಷ್ಮೀ ಕೆಲಸ ಮಾಡುತ್ತಿರುವ ಮಾಲ್‌ನಲ್ಲಿನ ಆಕೆಯ ಸ್ನೇಹಿತರನ್ನು ವಿಚಾರಣೆ ನಡೆಸಲಾಯಿತು. ಮಹಾಲಕ್ಷ್ಮೀಯ ಸ್ನೇಹಿತ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್‌ನನ್ನೂ ವಿಚಾರಣೆ ಗೊಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಕ್ತದ ಕಲೆಗಳು ಪತ್ತೆ ತಲೆನೋವು: ಹತ್ಯೆ ನಡೆದ ಮನೆಯನ್ನು ಆರೋಪಿ ರಾಸಾಯನಿಕ ಬಳಸಿ ಸ್ವಚ್ಛಗೊಳಿಸಿರುವುದರಿಂದ ರಕ್ತದ ಕಲೆ ಮತ್ತೆ ಮಾಡುವುದು ವಿಧಿ ವಿಜ್ಞಾನ ಪ್ರಯೋಗಾಲಯದ ತಂತ್ರಜ್ಞರಿಗೆ ತಲೆನೋವಾಗಿದೆ. ಏಕೆಂದರೆ ರಸಾಯನಿಕ ಬಳಸಿದರೂ ರಕ್ತದ ಕಲೆಗಳು ಪತ್ತೆಯಾಗಿಲ್ಲ.