ಮಹಿಳಾ ಕ್ರಿಕೆಟ್: ಭಾರತ ತಂಡದ ವಿಶ್ವ ದಾಖಲೆಯ ಬೃಹತ್ ಮೊತ್ತ
ಚೆನೈ: ನಗರದ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕಮಾತ್ರ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಭಾರತ ಮಹಿಳಾ ತಂಡವು ವಿಶ್ವ ದಾಖಲೆ ನಿರ್ಮಿಸಿದೆ.
ಟೀಮ್ ಇಂಡಿಯಾ 115.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 603 ರನ್ ಕಲೆಹಾಕಿ ಮೊದಲ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 600 ರನ್ ಕಲೆಹಾಕಿದ ವಿಶ್ವದ ಮೊದಲ ಮಹಿಳಾ ತಂಡ ಎನಿಸಿಕೊಂಡಿದೆ. 2024 ರಲ್ಲಿ ಆಸ್ಟ್ರೇಲಿಯಾ ತಂಡವು 575 ರನ್ಗಳಿಸಿ ಈ ದಾಖಲೆ ಬರೆದಿತ್ತು.
ಟಾಸ್ ಗೆದ್ದ ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಶೆಫಾಲಿ ಹಾಗೂ ಮಂದಾನ ಮೊದಲ ವಿಕೆಟ್‌ಗೆ 51.6 ಓವರ್‌ಗಳಲ್ಲೇ 292 ರನ್ ಪೇರಿಸಿದರು. ಆ ಮೂಲಕ ಮಹಿಳೆಯರ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ಅತಿ ಹೆಚ್ಚು ರನ್‌ಗಳ ಜೊತೆಯಾಟದ ದಾಖಲೆ ಬರೆದರು. ಇನ್ನು ಮೊದಲ ದಿನದ ಅಂತ್ಯಕ್ಕೆ ಭಾರತ ಮಹಿಳಾ ತಂಡ 98 ಓವರಗಳಲ್ಲಿ 4 ವಿಕೇಟ್ ನಷ್ಟ್‌ಕ್ಕೆ 525 ರನ್‌ಗಳಿಸಿತ್ತು.