ಮಹಿಳಾ ಟಿ-20 ವಿಶ್ವಕಪ್: ಆತಿಥೇಯ ಮಲೇಷ್ಯಾವನ್ನು ಎದುರಿಸಲಿರುವ ಭಾರತ
10:55 AM Jan 21, 2025 IST | Samyukta Karnataka
ಕೌಲಲಾಂಪುರ: ಬಯೂಮಾಸ್ ಕ್ರೀಡಾಂಗಣದಲ್ಲಿ 19 ವರ್ಷದೊಳಗಿನವರ ಮಹಿಳಾ ಟಿ-20 ವಿಶ್ವಕಪ್ ಕ್ರಿಕೆಟ್‌ನ ಎರಡನೇ ಆವೃತ್ತಿಯಲ್ಲಿ ಇಂದು ಹಾಲಿ ಚಾಂಪಿಯನ್ ಭಾರತ, ಮಲೇಷ್ಯಾ ಎದುರು ಸೆಣಸಲಿದೆ.
ಎ ಗುಂಪಿನಲ್ಲಿರುವ ಭಾರತ ಅಗ್ರಸ್ಥಾನದಲ್ಲಿದೆ ಒಂದು ಗುಂಪಿನಲ್ಲಿ ಒಟ್ಟು 4 ತಂಡಗಳಿದ್ದು ಅಗ್ರ 3 ತಂಡಗಳು ಸೂಪರ್ ಸಿಕ್ಸ್‌ಗೆ ಸೇರಲಿವೆ. ಸೂಪರ್ ಸಿಕ್ಸ್‌ನಲ್ಲಿ ತಲಾ 6 ತಂಡಗಳ ಎರಡು ಗುಂಪುಗಳಿರುತ್ತವೆ. ಎರಡೂ ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ ತಲಾ 2 ಗುಂಪುಗಳು ಸೆಮಿಫೈನಲ್‌ಗೇರಲಿವೆ.