For the best experience, open
https://m.samyuktakarnataka.in
on your mobile browser.

ಮಹಿಳೆಯ ಕೊಲೆಗೆ ಯತ್ನ: ನಾಲ್ಕು ಆರೋಪಿಗಳ ಬಂಧನ

12:29 PM Dec 12, 2024 IST | Samyukta Karnataka
ಮಹಿಳೆಯ ಕೊಲೆಗೆ ಯತ್ನ  ನಾಲ್ಕು ಆರೋಪಿಗಳ ಬಂಧನ

ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬ್ಯಾಂಕರ್ಸ್ ಕಾಲೊನಿಯಲ್ಲಿ ಬುಧವಾರ ಮಧ್ಯಾಹ್ನ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ನಾಲ್ಕು ಜನ ಆರೋಪಿತರನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ.

ಹೆಗ್ಗೇರಿಯ ಅಭಿಷೇಕ ಎಂಬ ಯುವಕ ಬ್ಯಾಂಕರ್ಸ್ ಕಾಲೋನಿಯಲ್ಲಿನ ಪಲ್ಲವಿ ಹಾಗೂ ಸುವರ್ಣಾ ಎಂಬ ಇಬ್ಬರು ಮಹಿಳೆಯರಿಗೆ ಫೈನಾನ್ಸ್ ಮಾಡಿದ್ದು, ಈ ನಡುವೆ ಸುವರ್ಣಾ ಎಂಬ ಮಹಿಳೆಯ ಜೊತೆ ಅಭಿಷೇಕ್ ಅತಿಯಾದ ಸಲುಗೆ ಸ್ನೇಹ ಬೆಳೆದಿತ್ತು. ಹೀಗಾಗಿ ಇವರಿಬ್ಬರ ವಿಚಾರವನ್ನು ಹಲ್ಲೆಗೊಳಗಾದ ಪಲ್ಲವಿ ಸುವರ್ಣಾಳ ಮನೆಯವರಿಗೆ ತಿಳಿಸಿದ್ದು, ಪಲ್ಲವಿಗೆ ಬುದ್ದಿ ಕಲಿಸಬೇಕು ಎಂದು ಸುವರ್ಣಾ ಹಾಗೂ ಅಭಿಷೇಕ್ ಪ್ಲ್ಯಾನ್ ಮಾಡಿ, ಅಭಿಷೇಕ್ ತನ್ನ ಇಬ್ಬರು ಸ್ನೇಹಿತರಾದ ಅಭಿಷೇಕ ಹಾಗೂ ಪ್ರಜ್ವಲ್ ಎಂಬುವರಿಂದ ಮಚ್ಚನ್ನು ತರಿಸಿ ಪಲ್ಲವಿ ಎಂಬ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿದ ಘಟನೆ ನಡೆದಿತ್ತು.

ಘಟನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ PI ನೇತೃತ್ವದ ತಂಡವು ಸದರಿ ಪ್ರಕರಣದ ಆರೋಪಿಗಳಾದ ಅಭಿಷೇಕ್ ಬಿಲಾನಾ, ಸುವರ್ಣ ಜರೆ, ಅಭಿಷೇಕ್ ಶಿಕ್ಕಲಿಗಾರ್, ಪ್ರಜ್ವಲ್ ಘೋಡಕೆ ಎಂಬ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.