For the best experience, open
https://m.samyuktakarnataka.in
on your mobile browser.

ಮಾಜಿ ಉಪ ಸಭಾಪತಿ ನಿಟ್ಟೂರಕರ್ ನಿಧನ

03:52 PM Dec 12, 2024 IST | Samyukta Karnataka
ಮಾಜಿ ಉಪ ಸಭಾಪತಿ ನಿಟ್ಟೂರಕರ್ ನಿಧನ

ಭಾಲ್ಕಿ : ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಮಾಜಿ ಉಪಸಭಾಪತಿ ಕೇಶವರಾವ್ ನಿಟ್ಟೂರಕರ್ ಗುರುವಾರ ನಿಧನರಾದರು.
ಮೂಲತಃ ತಾಲ್ಲೂಕಿನ ನಿಟ್ಟೂರ್ ಗ್ರಾಮದವರಾದ ನಿಟ್ಟೂರಕರ್ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು. ಸರಳ ಸಜ್ಜನಿಕೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಅವರು ಬೀದರ್ ಜಿಲ್ಲೆಯ ಜನರ ಮನಗೆದ್ದಿದ್ದರು. ಇವರ ಪರಿಶ್ರಮದಿಂದಲೇ ಬೀದರ್ ನಲ್ಲಿ ಖಾದಿ ಮಂಡಳಿ ಅಸ್ತಿತ್ವಕ್ಕೆ ಬಂದಿತು.

Tags :