ಮಾಜಿ ಡಿಸಿಎಂ ಸುಖ್‌ಬೀರ್ ಸಿಂಗ್ ಮೇಲೆ ಗುಂಡಿನ ದಾಳಿ
10:38 AM Dec 04, 2024 IST | Samyukta Karnataka
ಪಂಜಾಬ್: ಅಕಾಲಿದಳದ ನಾಯಕ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆದಿದೆ.
ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಸುಖ್‌ಬೀರ್ ಸಿಂಗ್ ಬಾದಲ್ ಅವರು ಸ್ವರ್ಣ ಮಂದಿರದ ಮುಂಭಾಗದಲ್ಲಿ ಸೇವಾದಾರನಾಗಿ ಮಂಗಳವಾರ ಕರ್ತವ್ಯ ನೆರವೇರಿಸಿದ್ದರು.
ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಅಕಾಲಿ ಸರ್ಕಾರದ ಅವಧಿಯಲ್ಲಿ ಡೇರಾ ಮುಖ್ಯಸ್ಥ ರಾಮ್ ರಹೀಮ್‌ಗೆ ಕ್ಷಮಾದಾನ ನೀಡುವಲ್ಲಿ ತಮ್ಮ ಪಾತ್ರವಿತ್ತು ಎಂದು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸುಖ್‌ಬೀರ್ ಬಾದಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಸಿಂಗ್ ಸಾಹಿಬಾನ್‌ಗಳ ಸಭೆಯು ಅಕಾಲ್ ತಖ್ತ್‌ನಲ್ಲಿ ನಡೆಯಿತು. ಎರಡು ತಿಂಗಳ ಹಿಂದೆ ಅಕಾಲ್ ತಖ್ತ್ ಅವರು ಸುಖಬೀರ್ ಸಿಂಗ್ ಬಾದಲ್ ಅವರನ್ನು ತಂಖೈಯಾ (ಧಾರ್ಮಿಕ ಅಪರಾಧಿ) ಎಂದು ಘೋಷಿಸಿದ್ದರು.