ಮಾತೃಪಕ್ಷಕ್ಕೆ ಬಂದ ಸಿಪಿವೈ ಅಭ್ಯರ್ಥಿಯಾದರೆ ಇನ್ನೂ ಸಂತೋಷ
ಕೊಪ್ಪಳ(ಯಲಬುರ್ಗಾ): ಕಾಂಗ್ರೆಸ್ ಪಕ್ಷದವರೇ ಆಗಿದ್ದ ಸಿ.ಪಿ. ಯೋಗೀಶ್ವರ ಮಾತೃಪಕ್ಷಕ್ಕೆ ಮತ್ತೆ ಬಂದಿದ್ದಾರೆ. ಚನ್ನಪಟ್ಟಣ ಉಪಮುಖ್ಯಮಂತ್ರಿಯ ಜವಾಬ್ದಾರಿಯ ಕ್ಷೇತ್ರವಾಗಿದ್ದು, ಉಪಚುನಾವಣೆಯಲ್ಲಿ ಅಭ್ಯರ್ಥಿಯಾದರೆ ಇನ್ನೂ ಸಂತೋಷ ಆಗಲಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಹೇಳಿದರು.
ತಾಲ್ಲೂಕು ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವಿಚಾರದಲ್ಲಿ ನಾವು ಆಪರೇಷನ ಕಮಲ ಮಾಡಿಲ್ಲ. ಅವರೇ ಒಪ್ಪಿಕೊಂಡು ಪಕ್ಷಕ್ಕೆ ಬಂದಿದ್ದಾರೆ. ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬಿಜೆಪಿಗರು ಮಾಡಬಾರದ್ದನ್ನೆಲ್ಲವನ್ನೂ ಮಾಡಿದ್ದಾರೆ. ಅವರು ನಮಗೆ ಪಾಠ ಮಾಡವುದು ಬೇಕಾಗಿಲ್ಲ ಎಂದರು.
ಬೆಂಗಳೂರಿನಲ್ಲಿ ಮೂರ್ನಾಲ್ಕು ಕಡೆ ಮಳೆಯಿಂದ ಸಮಸ್ಯೆ ಯಾಗಿದೆ. ಮಳೆ ಹಿನ್ನೆಲೆ ಸಣ್ಣಪುಟ್ಟ ಸಮಸ್ಯೆಯಾಗಿದೆ. ಹೆಚ್ಚಿನ ಅನುದಾನ ನೀಡಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇವೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ ಮಾಡಿಕೊಳ್ಳುತ್ತೇವೆ. ಆರೋಗ್ಯ ಇಲಾಖೆಯಿಂದ ಉಚಿತವಾಗಿ ಮನೆ ಮನೆಗೆ ಮಾತ್ರೆ, ಚಿಕಿತ್ಸೆ ನೀಡುವ ಯೋಜನೆ ಆರಂಭವಾಗಲಿದೆ. ಆರೋಗ್ಯವಂತ ಸಮಾಜ ಮಾಡುವ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದರು.