ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಾನವೀಯತೆ ಕೊಲೆಗೈದಿರುವ ಬೆಳಗಾವಿ ಜಿಲ್ಲಾಡಳಿತ

12:37 PM Aug 08, 2024 IST | Samyukta Karnataka

ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸುವ ಕರ್ನಾಟಕದಲ್ಲಿ ಇದ್ದೆವೋ ಅಥವಾ ಮಾನವೀಯತೆ ಸತ್ತಿರುವ ತಾಲಿಬಾನ್ ನಲ್ಲಿದ್ದೆವೋ..??

ಬೆಂಗಳೂರು: ಮಾನವೀಯತೆಯನ್ನು ಕೊಲೆಗೈದಿರುವ ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಎಂಎಲ್​ಸಿ ಸಿ.ಟಿ.ರವಿ ಆಗ್ರಹಿಸಿದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಮಾನವೀಯತೆಯ ಅಂತಃಕರಣ ಇಲ್ಲದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ. ಎದೆ ಎತ್ತರಕ್ಕೆ ಬೆಳೆದ ಮಗನ ದೇಹ ಸುಟ್ಟು ಕರಕಲಾದುದ್ದನ್ನು ಸಹಿಸುಕೊಳ್ಳುವುದೇ ಕಷ್ಟ. ಅಂತಹದರಲ್ಲಿ ಮಗನ ಅಳಿದುಳಿದ ದೇಹದ ಅವಶೇಷಗಳನ್ನು ಹೆತ್ತ ತಂದೆಯ ಕೈಗೆ "ಕೈ" ಚೀಲದಲ್ಲಿ ಒಪ್ಪಿಸಿ ಮನೆಗೆ ನಡೆಯಿರಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ..?? ಸಿಎಂ ಸಿದ್ದರಾಮಯ್ಯ ಅವರೆ, ನಾವು ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸುವ ಕರ್ನಾಟಕದಲ್ಲಿ ಇದ್ದೆವೋ ಅಥವಾ ಮಾನವೀಯತೆ ಸತ್ತಿರುವ ತಾಲಿಬಾನ್ ನಲ್ಲಿದ್ದೆವೋ..?? ಶವಕ್ಕೆ ಕನಿಷ್ಠ ಗೌರವವೂ ನೀಡದೆ, ಮಾನವೀಯತೆಯನ್ನು ಕೊಲೆಗೈದಿರುವ ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದಿದ್ದಾರೆ.

Tags :
#Belagavi#ScamSarkara#ಬೆಳಗಾವಿ
Next Article