ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಾಫಿಯಾ ರೂಪದ ಡಿಜಿಟಲ್ ವಂಚನೆ: ಜಾಗೃತಿ ಅಗತ್ಯ

02:30 AM Oct 30, 2024 IST | Samyukta Karnataka

ಈಗ ದೇಶಾದ್ಯಂತ ಡಿಜಿಟಲ್ ವಂಚನೆಗೆ ಒಳಗಾಗುವ ಭಯದ ಭೀತಿಯಲ್ಲಿ ಅಮಾಯಕರು ಬದುಕುವಂತಾಗಿದೆ. ವಂಚಿಸುವವರ ಗುಂಪು ಈಗ ಮಾಫಿಯಾ ಸ್ವರೂಪ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ `ಮನದ ಮಾತು' ಜನರನ್ನು ಎಚ್ಚರಿಸುವ ಕೆಲಸ ಕೈಗೊಂಡಿರುವುದು ಸಕಾಲಿಕ. ಆದರೆ ಇಡೀ ಜನರನ್ನು ವಂಚಿಸುವ ಒಂದು ವ್ಯವಸ್ಥೆ ರೂಪುಗೊಂಡಿರುವಾಗ ವ್ಯಕ್ತಿಗತವಾಗಿ ಇದರ ವಿರುದ್ಧ ಹೋರಾಟ ನಡೆಸುವುದು ಕಷ್ಟ. ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದರಲ್ಲಿ ಜನ ಹಿಂದೆ ಬಿದ್ದಿಲ್ಲ. ಅವರು ಡಿಜಿಟಲ್ ತಂತ್ರಜ್ಞಾನದ ಮೂಲಕ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಅವರನ್ನು ಈ ವಂಚನೆಯಿಂದ ಕಾಪಾಡುವ ಕೆಲಸವನ್ನು ಸರ್ಕಾರ ಬೃಹತ್ ಪ್ರಮಾಣದಲ್ಲಿ ಕೈಗೊಳ್ಳಲಿಲ್ಲ. ಅದರಲ್ಲೂ ಡಿಜಿಟಲ್ ಮೂಲಕ ಹಣ ವ್ಯವಹಾರ ನಡೆಸುವವರನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಕೈಗೊಳ್ಳಬೇಕಿತ್ತು. ಮೊಬೈಲ್ ಮೂಲಕ ನಡೆಯುವ ಮೋಸ, ವಂಚನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ದೊಡ್ಡ ಆಂದೋಲನ ನಡೆಸುವುದು ಅಗತ್ಯ. ಮಹಾರಾಷ್ಟ್ರ ನಂತರ ಅತಿ ಹೆಚ್ಚು ಹಣಕಾಸು ವ್ಯವಹಾರ ಮೊಬೈಲ್ ಮೂಲಕ ನಡೆಯುತ್ತಿರುವುದು ಕರ್ನಾಟಕದಲ್ಲಿ. ಅದರಿಂದ ಡಿಜಿಟಲ್ ವಂಚನೆ ಕೂಡ ರಾಜ್ಯದಲ್ಲಿ ಅಧಿಕಗೊಳ್ಳುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಇದನ್ನು ಸದೆಬಡಿಯುವ ಕೆಲಸವನ್ನು ಈಗಲೇ ಕೈಗೊಳ್ಳಬೇಕಿತ್ತು. ಸೈಬರ್ ಪೊಲೀಸ್ ಠಾಣೆಯ ಮೂಲಕ ಕ್ರಮ ಕೈಗೊಳ್ಳುವುದು ಆಮೆ ವೇಗದಲ್ಲಿ ಸಾಗುತ್ತಿದೆ.
ಈಗ ಬ್ಯಾಂಕ್ ನಲ್ಲಿಟ್ಟಿರುವ ಹಣ ರಹಸ್ಯವಾಗಿ ಏನೂ ಉಳಿದಿಲ್ಲ. ಬ್ಯಾಂಕ್ ಸಿಬ್ಬಂದಿಯ ಮೂಲಕ ನಿಮ್ಮ ಖಾತೆಯ ವಿವರ ಕಳ್ಳರಿಗೆ ತಲುಪಿರುತ್ತದೆ. ಅವರು ನಿಮಗೆ ಫೋನ್ ಮಾಡಿ ಪೊಲೀಸ್ ಎಂತಲೋ, ತೆರಿಗೆ ಅಧಿಕಾರಿಗಳು ಎಂದೋ ನಿಮ್ಮನ್ನು ಮೊದಲು ಹೆದರಿಸುತ್ತಾರೆ. ನೀವು ಗಾಬರಿಯಾಗಿದ್ದೀರಿ ಎಂದು ತಿಳಿದ ಕೂಡಲೇ ನಮ್ಮ ಫೋನ್ ಕರೆಯನ್ನು ವಾಟ್ಸಾಪ್‌ಗೆ ಅಥವ ಸ್ಕೈಪ್‌ಗೆ ಬದಲಿಸಿಕೊಳ್ಳುತ್ತಾರೆ. ಆಮೇಲೆ ನಿಮ್ಮನ್ನು ಅಲುಗಾಡಲು ಬಿಡುವುದಿಲ್ಲ. ಅವರ ಫೋನ್ ಹಿಂದೆ ಪೊಲೀಸ್ ಅಥವಾ ಸರ್ಕಾರಿ ಇಲಾಖೆಯ ಲೋಗೋ ಇರುತ್ತದೆ. ನೀವು ಅದನ್ನು ನೋಡಿ ಹೆದರುತ್ತೀರಿ. ಆಗ ನಿಮ್ಮನ್ನು ತಮ್ಮ ಖಾತೆಗೆ ಹಣ ಹಾಕಲು ಹೇಳುತ್ತಾರೆ. ಇದು ಡಿಜಿಟಲ್ ಅರೆಸ್ಟ್. ಮೊಬೈಲ್ ಮೂಲಕ ನಿಮ್ಮನ್ನು ಬಂಧಿಸುತ್ತಾರೆ. ನೀವು ಏನಾದರೂ ಹಣ ವರ್ಗಾಯಿಸಿದರೆ ಮುಗಿಯಿತು. ಹಣ ಹೋದಂಗೆ. ಅದರ ಬದಲು ನಿಮ್ಮ ಮೊಬೈಲ್‌ನಲ್ಲಿ ಸ್ಕ್ರೀನ್ ಶಾಟ್ ಮೂಲಕ ದೂರವಾಣಿ ಕರೆಯ ವಿವರ ಸೆರೆಹಿಡಿದು ಸೈಬರ್ ಪೊಲೀಸರಿಗೆ ತಿಳಿಸಿದರೆ ಸಾಕು. ಅವರ ಬಂಧನವಾಗುತ್ತದೆ. ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.
ಇದಲ್ಲದೆ ನಿಮ್ಮ ಖಾತೆ ಹಣ ಹಾಕಿ. ತಪ್ಪಾಗಿ ನಿಮಗೆ ಬಂದಿದೆ ಎಂದು ಹೇಳಿ ಅದನ್ನು ಹಿಂದಕ್ಕೆ ಕಳುಹಿಸಿ ಎನ್ನುತ್ತಾರೆ. ನೀವು ಹಿಂದಕ್ಕೆ ಹಣ ಕಳುಹಿಸಿದರೆ ನಿಮ್ಮ ಬ್ಯಾಂಕ್ ವಿವರ ಅವರಿಗೆ ಲಭಿಸಿ ಅವರು ಎಲ್ಲ ಹಣವನ್ನೂ ಪಡೆಯವ ಅಪಾಯವಿದೆ. ಜನವರಿಯಿಂದ ಏಪ್ರಿಲ್‌ವರೆಗೆ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ೧೨೦ ಕೋಟಿ ರೂ. ಡಿಜಿಟಲ್ ವಂಚನೆ ನಡೆದಿದೆ. ೨೦೨೩ರಲ್ಲಿ ಒಟ್ಟು ೧೫.೫ ಲಕ್ಷ ದೂರುಗಳು ದಾಖಲಾಗಿದೆ. ಡಿಜಿಟಲ್ ಬಂಧನ, ಡಿಜಿಟಲ್ ವ್ಯಾಪಾರ, ಡಿಜಿಟಲ್ ಬಂಡವಾಳ ಹೂಡಿಕೆ, ಡಿಜಟಲ್ ಹನಿ ಟ್ರ್ಯಾಪ್ ಮೂಲಕ ಹಣ ಕಸಿಯುವ ಕೆಲಸ ನಡೆಯುತ್ತಿವೆ. ಇದರ ಬಗ್ಗೆ ಎಚ್ಚರವಹಿಸುವುದು ಸೂಕ್ತ. ತಕ್ಷಣ ದೂರು ಕೊಟ್ಟಲ್ಲಿ ಹಣ ಕಳೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು. ಸರ್ಕಾರಿ ತನಿಖಾ ಸಂಸ್ಥೆಗಳ ಹೆಸರು ಹೇಳುತ್ತಾರೆ. ಅದರೆ ದೂರವಾಣಿಯಲ್ಲಿ ಯಾರೇ ಬೆದರಿಕೆ ಹಾಕಿದರೆ ಅದಕ್ಕೆ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ಸರ್ಕಾರ ಹಲವು ಬಾರಿ ಸ್ಪಷ್ಟಪಡಿಸಿದೆ. ಆದರೂ ಜನ ಹಣ ಕಳೆದುಕೊಳ್ಳುವುದು ನಿಂತಿಲ್ಲ. ಈಗ ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್ ವಂಚನೆಗಳ ಜಾಲದ ಮೂಲ ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಎಂದು ಗೊತ್ತಾಗಿದೆ. ಡಿಜಿಟಲ್ ಹಣಕಾಸು ವಂಚನೆಗೆ ಇತಿಮಿತಿ ಇಲ್ಲ.

Next Article