For the best experience, open
https://m.samyuktakarnataka.in
on your mobile browser.

ಮಾರ್ಚ್ 2025 ರಿಂದ ರೈಲು ಸಂಖ್ಯೆಗಳಲ್ಲಿ ಬದಲಾವಣೆ

01:25 PM Jan 22, 2025 IST | Samyukta Karnataka
ಮಾರ್ಚ್ 2025 ರಿಂದ ರೈಲು ಸಂಖ್ಯೆಗಳಲ್ಲಿ ಬದಲಾವಣೆ

ಹುಬ್ಬಳ್ಳಿ : ನೈಋತ್ಯ ರೈಲ್ವೆಯು ಈ ಕೆಳಗಿನ ರೈಲುಗಳಿಗೆ ರೈಲು ಸಂಖ್ಯೆಗಳಲ್ಲಿ ಬದಲಾವಣೆಗಳನ್ನು ಮಾಡಲಿದೆ. ಈ ಬದಲಾವಣೆಗಳು ಮಾರ್ಚ್ 2025 ರಿಂದ ಜಾರಿಗೆ ಬರಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ವಿವರ ಈ ಕೆಳಗಿನಂತೆ:

  • ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ದೈನಂದಿನ ಎಕ್ಸ್‌ಪ್ರೆಸ್:
    ರೈಲು ಸಂಖ್ಯೆ 12609 ರಿಂದ 16551 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 1, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.
  • ಮೈಸೂರು- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್:
    ರೈಲು ಸಂಖ್ಯೆ 12610 ರಿಂದ 16552 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 2, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.
  • ಯಶವಂತಪುರ-ತಿರುವನಂತಪುರಂ ನಾರ್ತ್ ಸಾಪ್ತಾಹಿಕ ಎಕ್ಸ್‌ಪ್ರೆಸ್:
    ರೈಲು ಸಂಖ್ಯೆ 22677 ರಿಂದ 16561 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 6, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

.* ತಿರುವನಂತಪುರಂ ನಾರ್ತ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ :
ರೈಲು ಸಂಖ್ಯೆ 22678 ರಿಂದ 16562 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 7, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

* ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ : 

ರೈಲು ಸಂಖ್ಯೆ 17311 ರಿಂದ 20679 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 7, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

  • ಎಸ್ಎಸ್ಎಸ್ ಹುಬ್ಬಳ್ಳಿ- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಎಕ್ಸ್‌ಪ್ರೆಸ್ :
    ರೈಲು ಸಂಖ್ಯೆ 17312 ರಿಂದ 20680 ಕ್ಕೆ ಬದಲಾಗುತ್ತದೆ, ಇದು ಮಾರ್ಚ್ 6, 2025 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಜಾರಿಗೆ ಬರಲಿದೆ.

ಈ ರೈಲುಗಳ ಅಸ್ತಿತ್ವದಲ್ಲಿರುವ ಸಮಯ ಮತ್ತು ನಿಲುಗಡೆಗಳಲ್ಲಿ ಯಾವುದೇ ಇರುವುದಿಲ್ಲ ಎಂದು ನೈಋತ್ಯ ರೈಲ್ಚೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

Tags :