ಮಾರ್ಟಿನ್‌ಗೆ ನಂ.1ರಾಜ್ಯಕ್ಕೆ ಸ್ವಾಗತ
07:50 PM Feb 19, 2024 IST | Samyukta Karnataka
ಬೆಂಗಳೂರು: ಮಾರ್ಟಿನ್‌ಗೆ ನಂ.1ರಾಜ್ಯಕ್ಕೆ ಸ್ವಾಗತ ಎಂದು ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಆಸ್ಟ್ರಿಯಾ ದೇಶದ ಕಾರ್ಮಿಕ ಹಾಗೂ ವಿತ್ತ ಸಚಿವರಾದ ಡಾ. ಮಾರ್ಟಿನ್ ಕೊಚರ್ ಹಾಗೂ ಅವರ ತಂಡ ಈ ದಿನ ನನ್ನನ್ನು ಭೇಟಿಮಾಡಿದರು.
ಈ ವೇಳೆ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ವ್ಯಾಪಾರ, ನವೀಕರಿಸಬಹುದಾದ ಇಂಧನ, ಪರಿಸರ ತಂತ್ರಜ್ಞಾನ, ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವಂತಹ ಹಲವು ಮಹತ್ತರ ವಿಷಯಗಳ ಕುರಿತು ಚರ್ಚಿಸಿದೆವು.
ಹೂಡಿಕೆ ಆಕರ್ಷಿಸುವಲ್ಲಿ ನಂ1, ವಿದ್ಯುತ್ ವಾಹನಗಳ ನಾವೀನ್ಯತೆಯಲ್ಲಿ ನಂ.1 ಬಯೋಟೆಕ್ ಉತ್ಪಾದನೆ, R & D ಕೇಂದ್ರ ಸೇರಿದಂತೆ ಹಲವು ವಲಯಗಳಲ್ಲಿ ರಾಜ್ಯವು ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದ್ದು, ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದೆ ಎಂದಿದ್ದಾರೆ.